ತಿಂಡಿ ಪ್ರಿಯರು ಏನಾದರೂ ತಿನ್ನುತ್ತಲೆ ಇರುತ್ತಾರೆ. ಬರ್ಗರ್, ನಿಪ್ಪಟ್ಟು, ಬೇಲ್ ಪುರಿ, ಮಸಾಲ್ ಪುರಿ ಇವುಗಳನ್ನು ಬಿಟ್ಟು ಇರುವುದು ಹಲವರಿಗೆ ಕಷ್ಟ ಎನಿಸಬಹುದು. ಆದರೆ ಯೋಚಿಸುವ ಅಗತ್ಯ ಇಲ್ಲ. ಸರಳ ವಿಧಾನದ ಜೊತೆಗೆ ಇವುಗಳನ್ನು ಮನೆಯಲ್ಲಿಯೇ ಮಾಡಬಹುದು. ಸರಳವಾಗಿ ಮನೆಯಲ್ಲಿ ಕೇವಲ 10 ನಿಮಿಷಗಳಲ್ಲಿ ನಿಪ್ಪಟ್ಟು ತಯಾರಿಸಬಹುದು.
ಬೇಕಾಗುವ ಸಾಮಗ್ರಿಗಳು:
* ಕಡಲೆಕಾಯಿ- 1ಕಪ್
* ಎಳ್ಳು- ಅರ್ಧ ಕಪ್
* ಜೀರಿಗೆ- ಅರ್ಧ ಸ್ಪೂನ್
* ರುಚಿಗೆ ತಕ್ಕಷ್ಟು ಉಪ್ಪು
* ಖಾರದ ಪುಡಿ- 2 ಟೀ ಸ್ಪೂನ್
* ಕಡಲೆ ಹಿಟ್ಟು- ಅರ್ಧ ಕಪ್
* ಕರಿಬೇವು- ಸ್ವಲ್ಪ
* ಅಕ್ಕಿ ಹಿಟ್ಟು- ಅರ್ಧ ಕಪ್
* ಅಡುಗೆ ಎಣ್ಣೆ
ಮಾಡುವ ವಿಧಾನ:
* ಮೊದಲು ಒಂದು ಮಿಕ್ಸಿ ಜಾರಿಗೆ ಕಡಲೆಕಾಯಿ ಹಾಕಿ ಪುಡಿ ಮಾಡಿಕೊಳ್ಳಿ,
* ಒಂದು ಬೌಲ್ಗೆ ಪುಡಿ ಮಾಡಿದ ಕಡಲೆಕಾಯಿ ಪುಡಿ, ಜೀರಿಗೆ, ಎಳ್ಳು, ಕಡಲೆ ಹಿಟ್ಟು, ಖಾರದ ಪುಡಿ, ಅಕ್ಕಿ ಹಿಟ್ಟು, ಉಪ್ಪು, ಕರಿಬೇವು, ಬಿಸಿ ಮಾಡಿದ ಅಡುಗೆ ಎಣ್ಣೆ ಹಾಕಿ ಚೆನ್ನಾಗಿ ಕಲಸಿಕೊಳ್ಳಿ.
* ಬಳಿಕ ಇದನ್ನು ಸಣ್ಣ ಉಂಡೆ ಮಾಡಿಕೊಳ್ಳಿ. ನಂತರ ಇದನ್ನು ಸಣ್ಣದಾಗಿ ತಟ್ಟಿಕೊಳ್ಳಬೇಕು.
* ನಂತರ ಎಣ್ಣೆ ಬಿಸಿಯಾದ ಬಳಿಕ ತಟ್ಟಿದ ನಿಪ್ಪಟ್ಟನ್ನು ಕರಿಯುರಿ.
* ಈಗ ರುಚಿಕರವಾದ ಖಾರ ನಿಪ್ಪಟ್ಟು ಸವಿಯಲು ಸಿದ್ಧವಾಗುತ್ತದೆ.