ಹುಬ್ಬಳ್ಳಿ: ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (ಸಿಪಿಆರ್ಒ)ಯಾಗಿ ಡಾ. ಮಂಜುನಾಥ ಕನ್ಮಡಿ ಸೋಮವಾರ ಅಧಿಕಾರ ವಹಿಸಿಕೊಂಡರು ಇಂಡಿಯನ್ ರೈಲ್ವೆ ಟ್ರಾಫಿಕ್ ಸರ್ವಿಸ್ನ 2013ನೇ ಬ್ಯಾಚ್ನ ಅಧಿಕಾರಿಯಾಗಿರುವ ಡಾ. ಮಂಜುನಾಥ ಅವರು ಉಪ ಮುಖ್ಯ ವಾಣಿಜ್ಯ ವ್ಯವಸ್ಥಾಪಕ (ಪ್ರಯಾಣಿಕ ಸೇವೆ)ರಾಗಿದ್ದರು.
ಹುಬ್ಬಳ್ಳಿ ಮತ್ತು ಮೈಸೂರು ವಿಭಾಗದಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ನಿರ್ಗಮಿತ ಸಿಪಿಆರ್ಒ ಅನೀಶ್ ಹೆಗಡೆ ಅಧಿಕಾರ ಹಸ್ತಾಂತರಿಸಿದರು. ರೈಲ್ವೆ ಮಂಡಳಿಯ ಜಂಟಿ ನಿರ್ದೇಶಕ ಹುದ್ದೆಗೆ ಅನೀಶ್ ಹೆಗಡೆ ನಿಯುಕ್ತಿಗೊಂಡಿದ್ದಾರೆ.