ತುಮಕೂರು: ಕಿಡಿಗೇಡಿಗಳಿಂದ ಸರ್ಕಾರಿ ಶಾಲೆ ಪೀಠೋಪಕರಣಗಳು ಧ್ವಂಸವಾಗಿರುವ ಘಟನೆ ತುಮಕೂರು ಜಿಲ್ಲೆ ಶಿರಾ ಪಟ್ಟಣದಲ್ಲಿರುವ ಸಂತೇಪೇಟೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಕಳೆದ ರಾತ್ರಿ ಕಿಡಿಗೇಡಿಗಳಿಂದ ಪೀಠೋಪಕರಣಗಳ ಧ್ವಂಸವಾಗಿದ್ದು,
ವಿದ್ಯಾರ್ಥಿಗಳು ಕುಳಿತುಕೊಳ್ಳುವ ಡೆಸ್ಕ್, ಕುರ್ಚಿಗಳನ್ನು ಪುಡಿಗಟ್ಟಿರುವ ಕಿಡಿಗೇಡಿಗಳು. ಶಾಲಾ ಕಾಂಪೌಂಡ್ ಗೋಡೆ ಎತ್ತರ ಹೆಚ್ಚಿಸುವಂತೆ ಸ್ಥಳೀಯರ ಮನವಿ ಮಾಡಿದ್ದಾರೆ. ಇನ್ನೂ ಸ್ಥಳಕ್ಕೆ ಶಿರಾ ಬಿಇಒ ಭೇಟಿ ಪರಿಶೀಲನೆ ನಡೆಸಿದ್ದಾರೆ. ಶಿರಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.