ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ವೇಳೆ ಸ್ಪರ್ಧಿಗಳು ಪರಸ್ಪರ ಮಾನವೀಯರತೆ ಮರೆತು ಆಟವಾಡುತ್ತಿರುವುದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಟಾಸ್ಕ್ ಆಡುವ ವಿಚಾರಕ್ಕೆ ಬಂದರೆ ಸ್ಪರ್ಧಿ ವಿನಯ್ ಗೌಡ ತುಸು ಅಗ್ರೆಸ್ಸಿವ್ ಆಗಿ ಆಟವಾಡುತ್ತಿರುವುದನ್ನು ನೋಡಬಹುದಾಗಿದೆ. ಎದುರಾಳಿ ತಂಡದ ಸದಸ್ಯರನ್ನು ಅವರು ಗುರಿಯಾಗಿಸಿ ಮಾತನಾಡುವುದು, ಸೋತಾಗ ಶಿಕ್ಷೆ ನೀಡುವುದುಮ ಧಮ್ಕಿ ಹಾಕುವುದು ಸಾಕಷ್ಟು ಖಂಡನೆಗೆ ಗುರಿಯಾಗಿದ್ದು, ಬಿಗ್ಬಾಸ್ ಶೋ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದೆಲ್ಲದರ ನಡುವೆ ಈಗ ಬಿಗ್ಬಾಸ್ ಸ್ಪರ್ಧಿ ವಿನಯ್ ಕುರಿತು ನಟಿ ಇಳಾ ವಿಟ್ಲ ಆರೋಪ ಒಂದನ್ನು ಮಾಡಿದ್ದು, ಇದಕ್ಕೆ ನಟಿ ಸ್ವಪ್ನ ದೀಕ್ಷಿತ್ ಸಹ ದನಿಗೂಡಿಸಿದ್ದಾರೆ. 8 ವರ್ಷಗಳ ಹಿಂದೆ ಅಂದರೆ 2015ರಲ್ಲಿ ಖಾಸಗಿ ವಾಹಿನಿ ಒಂದರಲ್ಲಿ ರಿಯಾಲಿಟಿ ಶೋ ಒಂದು ಪ್ರಸಾರವಾಗಿತ್ತು. ಅದರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ವಿನಯ್ ತುಂಬಾ ಅಗ್ರೆಸ್ಸಿವ್ ಆಗಿ ನಡೆದುಕೊಳ್ಳುತ್ತಿದ್ದರು ಎಂದು ನಟಿ ಇಳಾ ವಿಟ್ಲ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ನಾನೊಬ್ಳು ಆರ್ಟಿಸ್ಟ್ ಆಗಿ ರಿಯಾಲಿ ಟೀ ಶೋ ಗಳನ್ನ ಮಾಡಿದ್ದಕ್ಕೆ ಹಾಗೇ ಸಾಮಾನ್ಯವಾಗಿ ಬಿಗ್ ಬಾಸ್ ನೋಡ್ತಿರೋ ಕಾರಣ ವಿನಯ್ ಅವರನ್ನ ಹತ್ತಿರದಿಂದ ನೋಡಿ ಅನುಭವಿಸಿರೋದಕ್ಕೆ ಪೋಸ್ಟ್ ಮಾಡ್ತಿದೀನಿ. ನನಗೇನಾದ್ರೂ ಆದ್ರೆ ನಾನು ಸುಮ್ನೆ ಬಿಡಲ್ಲ ಸುಮ್ನೆ ಬಿಡಲ್ಲ ಅಂತಾನೆ ಇರ್ತಾರಲ್ವಾ, ಆದ್ರೆ ಏನ್ ಮಾಡ್ತಿದ್ರು ಅವರಿಂದ ಬೇರೆಯವರಿಗೆ ತೊಂದರೆ ಆದ್ರೆ ಏನ್ ಮಾಡ್ಬೇಕಿತ್ತು. ಆಟ ಅಂದ್ಮೇಲೆ ಹೆಚ್ಚು ಕಡಿಮೆ ಇದ್ದೇ ಇರುತ್ತೆ ಸ್ವಲ್ಪ ಸ್ವಲ್ಪ ಗಾಯಗಳು ಆಗುತ್ತೆ ಅದು ಸರ್ವೇಸಾಮಾನ್ಯ ಬೇರೆಯವರು ಯಕ್ಕುಟೋದ್ರು ಪರ್ವಾಗಿಲ್ಲ ನಾನು ಗೆಲ್ಲಲೇ ಬೇಕು ಅನ್ನೋ ಮನಸ್ಥಿತಿ ಇರೋದು ಯಾವತ್ತಿಗೂ ಉದ್ದಾರ ಆಗಿಲ್ಲ.
ಯಾಲಿಟಿ ಶೋ ನೇ ಹಾಗೆ ಏನು ಮಾಡಕ್ಕಾಗಲ್ಲ ಇಷ್ಟ ಇದ್ರೆ ಹೋಗ್ಬೇಕು ಇಲ್ಲ ಅಂದ್ರೆ ಸುಮ್ನಿರಬೇಕು ಬಿಗ್ ಬಾಸ್ ಅಂದ್ರೆ ನನಗೆ ಮೊದಲಿಂದಾನು ಇಷ್ಟ ನಮ್ಮ ಕಿರುತೆರೆ ಹೆಮ್ಮೆ. ಮೊದ್ಲು ಕಿರುತೆರೆ ಅಂತ ತಾತ್ಸಾರ ಮಾಡಿದವರನ್ನು ಕಿರುತೆರೆಗೆ ಕರ್ಕೊಂಡು ಬಂದಿರುವ ಹೆಮ್ಮೆಯ ಶೋ ಕಿಚ್ಚ ಸುದೀಪ್ ಅವರು ಹೇಳುವ ಬುದ್ಧಿ ಮಾತು ನಮ್ಮ ಜೀವನಕ್ಕೂ ಅನ್ವಯಿಸುತ್ತೆ ಬಿಗ್ ಬಾಸ್ ಗೆ ಹೋಗ್ಬೇಕು ಅಂತೇನಿಲ್ಲ ಸುಮ್ನೆ ಕೇಳಿಸಿಕೊಂಡರೆ ಸಾಕಾಗುತ್ತೆ. ಇದೇ ವಿನಯ್ ಸೂಪರ್ ಜೋಡಿ ಟೈಮಲ್ಲಿ ನನ್ನ ಕಣ್ಣೆದುರಿಗೆ ಪ್ಲಾನ್ ಮಾಡ್ಕೊಂಡುಬಂದು ನಮ್ಮತ್ರ ಹೇಳ್ತಾ ಇದ್ರು ನನಗೇನಾದ್ರೂ ಆದ್ರೆ ನಾನ್ ಯಾರನ್ನು ಸುಮ್ಮನೆ ಬಿಡಲ್ಲ ಅಂತ ಹೆದ್ರಿಸೋದು