ತುಮಕೂರು:- ವ್ಯಕ್ತಿಯ ಮೇಲೆ ಕ್ರಷರ್ ಲಾರಿ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶೆಟ್ಟಿಕೆರೆ ಗೇಟ್ ಬಳಿ ಜರುಗಿದೆ.
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಶೆಟ್ಟಿಕೆರೆಯಲ್ಲಿ ಘಟನೆ ಜರುಗಿದೆ. ಚಿಕ್ಕನಾಯಕನಹಳ್ಳಿ ಕಡೆಯಿಂದ ಕ್ರಷರ್ ಲಾರಿ ಬಂದಿದ್ದು, ಲೋಡ್ ತುಂಬಿದ್ದ ಲಾರಿ ಹರಿದ ಹಿನ್ನೆಲೆ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದೆ. ಸಾವನ್ನಪ್ಪಿದ ವ್ಯಕ್ತಿ ಗುರುತು ಹಚ್ಚಲು ಪೊಲೀಸರು ಹುಡುಕಾಟ ನಡೆಸಿದ್ದಾರೆ.
ವ್ಯಕ್ತಿ ಮೃತದೇಹ ಸಂಪೂರ್ಣ ನಚ್ಚುಗುಜ್ಜಾಗಿದೆ. ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.