ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ರಾಜಕೀಯ ಸಂಘರ್ಷ ಆರಂಭವಾಗಿದೆಯಾ? ಹೀಗೆ ಪ್ರಶ್ನೆ ಮೂಡುವುದಕ್ಕೆ ಕಾರಣವಾಗಿರುವುದು ನಿನ್ನೆ ಬಿಜೆಪಿ ಕಾರ್ಯಕರ್ತನ ಮೇಲೆ ನಡೆದಿರುವ ಮಾರಣಾಂತಿಕ ಹಲ್ಲೆ ಪ್ರಕರಣ.. ಹೌದು ಶಾಸಕ ಸಂಗಮೇಶ್ ಹಾಗೂ ಅವರ ಪುತ್ರನ ವಿರುದ್ಧ ಫೇಸ್ಬುಕ್ ಫೋಸ್ಟ್ನ್ನ ಗೋಕುಲಕೃಷ್ಣ ಪೋಸ್ಟ್ ಮಾಡಿದ್ದರು. ಅದರ ಬೆನ್ನಲ್ಲೆ ದುಷ್ಕರ್ಮಿಗಳು ಗೋಕುಲ್ ರವರಿಗೆ ಸೇರಿದ್ದ ಕಾರನ್ನ ಲಟ್ಟಾದಿಂದ ಹೊಡೆದು ಜಖಂಗೊಳಿಸಿದ್ದರು. ಇನ್ನೇನು ಇಲ್ಲಿಗೆ ಮುಗಿಯಿತು ಎನ್ನುವಷ್ಟರಲ್ಲಿ ನಿನ್ನೆ ರಾತ್ರಿ ಗೋಕುಲ್ರವರ ಮೇಲೆ ಹಲ್ಲೆ ಮಾಡಲಾಗಿದೆ.
ಈ ಬಗ್ಗೆ ಬಿಜೆಪಿ ಮುಖಂಡರು ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದು, ನಡೆದ ಘಟನೆಯ ಬಗ್ಗೆ ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ. ಕಾರು ಜಖಂಗೊಂಡ ಸಂದರ್ಭದಲ್ಲಿ ಗೋಕುಲ್ ಮನೆಯಲ್ಲಿ ಇರಲಿಲ್ಲ. ಬೇರೆಡೆಗೆ ಹೋಗಿದ್ದ ಅವರು ಸಂಜೆ ಭದ್ರಾವತಿಗೆ ವಾಪಸ್ ಆಗಿದ್ದಾರೆ. ಅಲ್ಲದೆ ಊಟ ತೆಗೆದುಕೊಳ್ಳಲು ಬಿ.ಹೆಚ್.ರೋಡ್ನಲ್ಲಿರುವ ಕಾಂಚನ್ ಹೋಟೆಲ್ ಹೋಗಿದ್ದರು ಎನ್ನಲಾಗಿದೆ. ಈ ವೇಳೆ ಅಲ್ಲಿಗೆ ಬಂದು ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬುದು ಆರೋಪ.
ಇನ್ನೂ ಪ್ರಕರಣ ಅಸಲಿಗೆ ಬೇರೆಯದ್ದೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಮುಖ್ಯವಾಗಿ ವೈಯಕ್ತಿಕ ದ್ವೇಷ ಹಾಗೂ ಪ್ರಚೋದನೆಯ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.ಗೋಕುಲಕೃಷ್ಣನ್ ಫೇಸ್ಬುಕ್ ಫೋಸ್ಟ್ಗಳು ಈ ಸಂಬಂಧ ವೈರಲ ಆಗುತ್ತಿವೆ. ಭದ್ರಾವತಿಯ ಇಸ್ಪೀಟ್, ಕ್ರಿಕೆಟ್ ದಂಧೆ ಬಗ್ಗೆ ಶಿವಮೊಗ್ಗ ಪೊಲೀಸರಿಗೆ ಗೊತ್ತಿಲ್ಲದ ವಿಚಾರವೇನಲ್ಲ. ಆದರೆ ಕಣ್ಮುಚ್ಚಿ ಕುಳಿತಿರುತ್ತದೆ ಇಲಾಖೆಯಷ್ಟೆ..
ಇನ್ನೂ ಈ ವಿಚಾರದಲ್ಲಿ ಗೋಕುಲ್ ಕೃಷ್ಣನ್ ಹಾಕಿದ ಫೋಸ್ಟ್ ಸಂಬಂಧ ಅವರ ಕಾರು ಜಖಂಗೊಳಿಸಲಾಯ್ತು ಹಾಗೂ ಅವರ ಮೇಲೆ ಹಲ್ಲೆ ಮಾಡಲಾಯ್ತು ಎಂಬುದು ಒಂದು ಕಡೆಯವರ ವಾದ.. ಇದೇ ರೀತಿಯಲ್ಲಿ ಇನ್ನೊಂದು ಕಡೆಯ ವಾದ ಹೀಗಿದೆ. ಈ ಸಂಬಂಧ ವಾಟ್ಸ್ಯಾಪ್ಗಳಲ್ಲಿ ಗೋಕುಲ್ ಕೃಷ್ಣನ್ರವರದ್ದು ಎನ್ನಲಾದ ಫೋನ್ ಕಾಲ್ ವೊಂದು ವೈರಲ್ ಆಗುತ್ತಿದೆ. ಅಲ್ಲದೆ ಗೋಕುಲ್ರವರು ಹಾಕಿರುವ ಫೇಸ್ ಬುಕ್ ಪೋಸ್ಟ್ ಸಹ ಭದ್ರಾವತಿಗರ ವಾಟ್ಸ್ಯಾಪ್ಗಳಲ್ಲಿ ಷೇರ್ ಆಗುತ್ತಿದೆ.
ಬಾಡಿಗೆ ಬೈಕ್’ನಲ್ಲಿ 330km ಪ್ರಯಾಣಿಸಿ ವಿಧಾನಸಭೆಗೆ ತೆರಳಿದ ಜನಪ್ರತಿನಿಧಿ!
ಗೋಕುಲ ಹಾಗೂ ಕೆಂಚನಳ್ಳಿ ಕುಮಾರ ಎಂಬವರ ನಡುವೆ ವಿವಿಧ ಕಾರಣಕ್ಕೆ ವ್ಯಾಜ್ಯವಿದೆ ಎನ್ನಲಾಗಿದೆ. ನಿನ್ನೆ ಈ ಸಂಬಂಧ ಗೋಕುಲ್ ಫೇಸ್ಬುಸ್ ಪೋಸ್ಟ್ ಹಾಕಿದ್ದಾರೆ ಎನ್ನಲಾಗಿದೆ. ಕಾರು ಜಖಂ ಆದ ಘಟನೆಯ ನಂತರದ ಫೋಸ್ಟ್ಗಳಲ್ಲಿ ಕುಲ್ಡಾ ಐ ಆಮ್ ಕಮ್ಮಿಂಗ್, ಡಾರ್ಲಿಂಗ್ ಕೆಂಚು, ಐ ಇನ್ ಭದ್ರಾವತಿ ಅಟೆಂಡ್ ಕಾಲ್ ಎಂದು ಗೋಕುಲ್ ಕೃಷ್ಣನ್ ಫೋಸ್ಟ್ ಹಾಕಿದ್ದಾರೆ ಎಂಬ ಸ್ಕ್ರೀನ್ಶಾಟ್ಗಳು ಹರಿದಾಡುತ್ತಿವೆ. ಇಷ್ಟೆ ಅಲ್ಲದೆ ಕೆಂಚನಳ್ಳಿ ಕುಮಾರನಿಗೆ ಕರೆ ಮಾಡಿದ ಗೋಕುಲ್ ಕಾಂಚನ್ ಹೋಟೆಲ್ ಹತ್ರ ಇದ್ದೇನೆ ಬಾ ಎಂದು ಹೇಳುವ ಆಡಿಯೋವೊಂದು ವಾಟ್ಸ್ಯಾಪ್ ನಲ್ಲಿ ಹರಿದಾಡುತ್ತಿದೆ.
ಲಭ್ಯ ಮಾಹಿತಿ ಪ್ರಕಾರ, ಈ ಆಡಿಯೋ ಸವಾಲ್ ಬೆನ್ನಲ್ಲೆ ಕಾಂಚನ್ ಹೋಟೆಲ್ ಬಳಿಗೆ ಒಂದು ಬಣ ತೆರಳಿದೆ. ಅಲ್ಲಿ ಎರಡು ಕಡೆಯವರ ನಡುವೆ ಹೊಡೆದಾಟವಾಗಿದ್ದು, ಗೋಕುಲ್ರಿಗೆ ಪೆಟ್ಟು ಬಿದ್ದಿದೆ. ಇಷ್ಟೆ ಅಲ್ಲದೆ ಸರ್ಕಾರಿ ಆಸ್ಪತ್ರೆಯ ಮುಂದೆಯು ಇದೇ ಕಾರಣಕ್ಕೆ ಎರಡು ಕಡೆಯವರ ನಡುವೆ ಹೊಡೆದಾಟವಾಗಿದ್ದು ಭದ್ರಾವತಿಯ ಪ್ರಮುಖ ಮುಖಗಳು ಅಲ್ಲಿ ಕಾಣಸಿಕ್ಕಿದ್ದವು ಎನ್ನುತ್ತದೆ ಸುದ್ದಿಮೂಲ. ಒಟ್ಟಾರೆ ವೈಯಕ್ತಿಕ ವಿಚಾರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಸದಸ್ಯರ ನಡುವೆ ಹೊಡೆದಾಟ ನಡೆದಿದ್ದು ಗಲಾಟೆಗೆ ಅದರದ್ದೆ ಆದ ಆಯಾಮಗಳು ಸಿಕ್ಕು ವಿವಿಧ ರೀತಿಯಲ್ಲಿ ವರದಿಯಾಗುತ್ತಿದೆ.