ಹುಬ್ಬಳ್ಳಿ: ಪಾರ್ಟ್ ಟೈಮ್ ಜಾಬ್ ಹೆಸರಿನಲ್ಲಿ ಹುಬ್ಬಳ್ಳಿಯ ವ್ಯಕ್ತಿಯೊಬ್ಬರಿಂದ 6.28 ಲಕ್ಷ ರೂ. ಆನ್ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಲಾಗಿದೆ.
ಇನ್ಸ್ಟಾಗ್ರಾಂನಲ್ಲಿ ಎಕ್ಜೆಡ್ ಎಂಬ ಗ್ರೂಪ್ನಿಂದ ನಗರದ ಅಮನ್ ಕೆ. ಎಂಬುವರನ್ನು ಅಪರಿಚಿತರು ಸಂಪರ್ಕಿಸಿದ್ದಾರೆ. ನಂತರ ದಿಶಾ ಎಂಬುವರನ್ನು ಸಂಪರ್ಕಿಸಲು ಸೂಚಿಸಿದ್ದಾರೆ. ಪಾರ್ಟ್ ಟೈಂ ಜಾಬ್ ಕೊಡುವುದಾಗಿ ಹೇಳಿದ ದಿಶಾ, ಮೊದಲು ಕೆಲಸ ಕೊಟ್ಟು 16,600 ರೂ. ಪಡೆದಿದ್ದಾಳೆ. ನಂತರ ವಿವಿಧ ಟಾಸ್ಕ್ ನೀಡುವುದಾಗಿ ನಂಬಿಸಿ ಬ್ಯಾಂಕ್ ಖಾತೆಯ ವಿವರ ಪಡೆದು ಒಟ್ಟು 6,28,470 ರೂ. ಆನ್ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿದ್ದಾಳೆ.
ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.