ಬೆಂಗಳೂರು: ಯಾವುದೇ ಮಾಹಿತಿ ಇಲ್ಲದೆ ನ್ಯಾಯ ಬೆಲೆ ಅಂಗಡಿ ಸ್ಥಳಾಂತರ ಹಿನ್ನೆಲೆ, ಆಹಾರ ಇಲಾಖೆಯ ವಿರುದ್ಧ ಜನರು ಆಕ್ರೋಶ ಹೊರ ಹಾಕಿದ್ದಾರೆ.
ನ್ಯಾಯ ಬೆಲೆ ಅಂಗಡಿ ಸ್ಥಳಾಂತರಕ್ಕೆ ಜನಸಾಮಾನ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ಯಶವಂತಪುರ ಕ್ಷೇತ್ರದ ಚನ್ನಕ್ಕಿಪಾಳ್ಯದಿಂದ ಚಿಕ್ಕಬಿದರಕಲ್ಲು ಗ್ರಾಮಕ್ಕೆ ಸ್ಥಳಾಂತರ ಮಾಡಲಾಗಿದೆ. ಇದರಿಂದ ಸುಮಾರು 250 ಪಡಿತರ ಕಾರ್ಡ್ ಇರುವ ಜನರಿಗೆ ಶಾಕ್ ನೀಡಿದಂತಾಗಿದೆ.
ಸುಮಾರು 30 ವರ್ಷದಿಂದ ಇದ್ದ ನ್ಯಾಯ ಬೆಲೆ ಅಂಗಡಿ ಶಿಪ್ಟ್ ಮಾಡಲಾಗಿದ್ದು, ಪ್ರಭಾವಿಗಳ ಒತ್ತಡಕ್ಕೆ ಮಣಿದು ಅಧಿಕಾರಿಗಳ ನಡೆಗೆ ಆಕ್ರೋಶ ವ್ಯಕ್ತವಾಗಿದೆ.
ಇಂದು ಪಡಿತರ ಧಾನ್ಯ ಪಡೆಯಲು ಬಂದ ಜನರಿಗೆ ಶಾಕ್ ನೀಡಿದೆ.bನಮಗೆ ಚನ್ನಕ್ಕಿ ಪಾಳ್ಯದ ನ್ಯಾಯ ಬೆಲೆ ಅಂಗಡಿಯಲ್ಲಿ ಪಡಿತರ ನೀಡುವಂತೆ ಆಗ್ರಹಿಸಿದ್ದಾರೆ