ಬಾಗಲಕೋಟೆ:- ದಿವ್ಯ ಶಕ್ತಿಯ ಭವ್ಯ ಪರಂಪರೆಯ ಮುಗಳಖೋಡ ಮತ್ತು ಜಡಗಾ ಮಠದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳಿಗೆ ಅಕ್ಷರ ಪುಸ್ತಕ ತುಲಾಭಾರ ರಬಕವಿಯಲ್ಲಿ ನಡೆದಿದ್ದು ಪ್ರಥಮ ಬಾರಿಗೆ ಹರ್ಷ ವ್ಯಕ್ತಪಡಿಸಿದರು
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಶ್ರೀ ಶಿವದಾಸಿಮಯ್ಯ ಕಲ್ಯಾಣಮಂಟಪದಲ್ಲಿ ಶ್ರೀ ಗುರುರಾಜ ಕೆಂಧೊಳಿ ಅವರ ಬರೆದು ಹಾಡಿದ ಭಕ್ತಿ ಗೀತೆಗಳು ಆರು ಪುಸ್ತಕಗಳ ಲೋಕಾರ್ಪಣೆ ಮತ್ತು ಕೆಂಧೊಳಿ ಜನಪದ ಸಂಭ್ರಮ ಕಾರ್ಯಕ್ರಮ ನಡೆಯಿತು.
ಜಾನಪದ ಸಂಗೀತ ಎಂದರೆ ಕೆಂಧೊಳಿ ಮುಗಳಖೋಡ ಮಠದ ಪೂಜ್ಯರ ಪವಾಡಗಳನ್ನು ಕಂಡು ಅದರ ಬಗ್ಗೆ ನಾಡಿನ ತುಂಬಾ ಹಾಡಿನ ಮುಖಾಂತರ ಪಸರಿಸುವ ಕೆಲಸ ಮಾಡಿದ್ದಾರೆ ಇದು ಹೆಮ್ಮೆಯ ಸಂಗತಿ ಎಂದು ಶ್ರೀಗಳು ಹೇಳಿದರು.
ಪೂಜ್ಯ ಶ್ರೀ ಸಿದ್ದರಾಮ ಶಿಯೋಗಿಗಳು ಒಂದು ಬಾರಿ ನುಡಿದರೆ ಅದು ನಡೆಯಲೇಬೇಕು. ಸುಳ್ಳು ಆಗುವ ಮಾತೇ ಇಲ್ಲ ಸೂರ್ಯ ಚಂದ್ರ ಬದಲಾಗಬಹುದು ಆದರೆ ನುಡಿದವಾಣಿ ಎಂದು ಬದಲಾಗುವುದಿಲ್ಲ ಅಷ್ಟೊಂದು ಸತ್ಯವನ್ನು ನುಡಿವವರು.
ಕವಿರತ್ನ ಕಾಳಿದಾಸನ ನಾಲಿಗೆಯ ಮೇಲೆ ಕಾಳಿಕಾದೇವಿ ಅಕ್ಷರವನ್ನು ಬರೆಯುತ್ತಾಳೆ ಬರೆದ ತಕ್ಷಣವೇ ಇಡೀ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಹೊರಹೊಮ್ಮುತ್ತಾನೆ ಅಷ್ಟೊಂದು ಶಕ್ತಿ ಅಕ್ಷರ ಮೇಲಿದೆ ಆದ್ದರಿಂದ ಪ್ರತಿಯೊಬ್ಬರೂ ಪುಸ್ತಕದಲ್ಲಿರುವ ಅಕ್ಷರವನ್ನು ಆಳವಾಗಿ ಓದಿ ಬುದ್ದಿವಂತರಾಗಿ ಎಂದು ಹೇಳಿದರು.
ಬೆಳಗಾವಿಯ ಮುಗಳಖೋಡ ಮಠದ ಪೂಜ್ಯರು ಶ್ರೀ ಡಾ ಮುರುಗರಾಜೇಂದ್ರ ಮಹಾಸ್ವಾಮಿಗಳು ನೂರು ಎಕರೆ ಭೂಮಿಯನ್ನು ಸರ್ಕಾರಕ್ಕೆ ದಾನವನ್ನಾಗಿ ನೀಡಿದ್ದಾರೆ ಮತ್ತು ಆ ಭಾಗದ ರೈತರು ಸೇರಿ 80 ಎಕರೆ ಭೂಮಿಯನ್ನು ನೀಡಿ ಒಟ್ಟು 180 ಎಕರೆ ಭೂಮಿಯನ್ನು ಸರ್ಕಾರಕ್ಕೆ ದಾನ ಮಾಡಿದ್ದಾರೆ ಅಲ್ಲಿ 180 ಕೋಟಿ ರೂಪಾಯಿ ವೆಚ್ಚದ ಕೆರೆ ನಿರ್ಮಾಣ ಮಾಡುತ್ತಿದ್ದೇವೆ ಈ ಕೆರೆ ನಿರ್ಮಾಣದಿಂದ ಆ ಭಾಗದ ರೈತರಿಗೆ ಉತ್ತಮ ನೀರು ಹರಿಯಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶ್ರೀ ಮ. ನಿ. ಪ್ರ ಪ್ರಭುದೇವರು ಆನಂದ ಯೋಗಾಶ್ರಮ ರಬಕವಿ ಡಾ. ಸುನಂದಾ ಶಿರೂರು. ಡಾ ಪದ್ಮಜಿತ್ ನಾಡಗೌಡ ಪಾಟೀಲ. ದೇವಲ ಸರ್ಕಾರ ದೇಸಾಯಿ. ಸುರೇಶ್ ಪಟ್ಟಣಶೆಟ್ಟಿ ಶ್ರೀಕಾಂತ್ ಕೆಂಧೊಳಿ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ