ನವದೆಹಲಿ: ಅತ್ಯಾಚಾರ ಆರೋಪಿಯೊಬ್ಬ (Rape Accused) ಜಾಮೀನಿನ (Bail) ಮೇಲೆ ಜೈಲಿನಿಂದ ಹೊರಬಂದು ತನ್ನ ಮೇಲೆ ಆರೋಪ ಹೊರಿಸಿದ್ದ ಮಹಿಳೆಯ ಅಪ್ರಾಪ್ತ ಮಗಳ ಮೇಲೆ ಆ್ಯಸಿಡ್ ದಾಳಿ (Acid Attack) ನಡೆಸಿ ನಂತರ ತಾನು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ದೆಹಲಿಯಲ್ಲಿ (Delhi) ನಡೆದಿದೆ. ಆಘಾತಕಾರಿ ಘಟನೆ ಮಧ್ಯ ದೆಹಲಿಯಲ್ಲಿ ನಡೆದಿದೆ. ಅತ್ಯಾಚಾರ ಆರೋಪಿ ಪ್ರೇಮ್ ಸಿಂಗ್ಗೆ ಕುಟುಂಬದವರ ವಿವಾಹದಲ್ಲಿ ಪಾಲ್ಗೊಳ್ಳಲು ಸ್ಥಳೀಯ ನ್ಯಾಯಾಲಯ ಜಾಮೀನು ನೀಡಿತ್ತು.
ಬೆಂಗಳೂರು: ಡೆಂಗ್ಯೂ ಆರ್ಭಟ, ಕಳೆದ 1 ತಿಂಗಳಲ್ಲಿ ದಾಖಲೆ ಮಟ್ಟದ ಕೇಸ್ ಪತ್ತೆ
ತನ್ನ ಮೇಲೆ ಆರೋಪ ಹೊರಿಸಿದ್ದ ಮಹಿಳೆಯ ಬಳಿಗೆ ತೆರಳಿ ದೂರನ್ನು ಹಿಂಪಡೆಯುವಂತೆ ಕೇಳಿದ್ದಾನೆ. ಅದನ್ನು ನಿರಾಕರಿಸಿದ್ದಕ್ಕೆ ಆತ ಮಹಿಳೆಯ 17 ವರ್ಷದ ಮಗಳ ಮೇಲೆ ಆ್ಯಸಿಡ್ ಎರಚಿದ್ದಾನೆ. ಬಳಿಕ ತಾನೂ ಕುಡಿದಿದ್ದಾನೆ. ಪ್ರೇಮ್ ಸಿಂಗ್ ಹಾಗೂ ಮಹಿಳೆ ದೆಹಲಿಯ ಆನಂದ್ ಪರ್ಬತ್ ಪ್ರದೇಶದಲ್ಲಿ ನೆರೆಹೊರೆಯವರು. ವ್ಯಕ್ತಿ ಮಧ್ಯಂತರ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಾಗ ಪ್ರಕರಣವನ್ನು ಹಿಂಪಡೆಯುವಂತೆ ಮಹಿಳೆಗೆ ಬೆದರಿಕೆ ಹಾಕಿದ್ದಾನೆ. ಆಕೆ ನಿರಾಕರಿಸಿದಾಗ ಈ ಕೃತ್ಯ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.