ಭ್ರಷ್ಟಾಚಾರ ಮತ್ತು ಕಾಂಗ್ರೆಸ್ ಇವೆರಡೂ ಒಂದೇ ನಾಣ್ಯದ ಎರಡು ಮುಖವಿದಂತೆ, ಇದೂ ಮೊದಲಿನಿಂದಲೂ ಗೊತ್ತಿರುವಂತಹದಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದರು. ಧಾರವಾಡದ ತಾಲೂಕಿನ ಉಪ್ಪಿನ ಬೇಟಗೇರಿ ಗ್ರಾಮದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅವರು ಇತ್ತೀಚೆಗೆ ಇಂಡಿ ಅಲೈನ್ಸ್ ಎಂದು ಮಾಡಿದರು. ಯುಪಿಎ ಇದ್ದದ್ದನ್ನು ಇಂಡಿ ಅಲೈನ್ಸ್ ಯಾಕೆ ಮಾಡಿದರು ಎಂದರೆ. ಯುಪಿಎದಲ್ಲಿ 12 ಲಕ್ಷ ಕೋಟಿಗಿಂತಲೂ ಹೆಚ್ಚು ಹಗರಣ ನಡೆದಿವೆ.
ಅದಕ್ಕೆ ಬ್ರ್ಯಾಂಡ್ ನೇಮ್ ಹಾಳಾಗಿತ್ತು ಈಗ ಹೊಸ ಹೆಸರಿನಲ್ಲಿ ಟೊಪ್ಪಿಗೆ ಹಾಕಲು ತೀರ್ಮಾನಿಸಿದ್ದರು. ಜೊತೆಗೆ ಮೂರೂ ರಾಜ್ಯಗಳಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಒಂದು ರಾಜ್ಯದಲ್ಲಿ ಮಾತ್ರ ಸ್ಥಳೀಯ ಕಾರಣದಿಂದ ಕಾಂಗ್ರೆಸ್ ಬಂದಿದೆ. ಕಾಂಗ್ರೆಸ್ ಪಾರ್ಟಿ ಅಂದರೆ ಅದೂ ಸಿಸಿಪಾರ್ಟಿ, ಕಾಂಗ್ರೆಸ್ ಕರಫ್ಸೆನ್ ಪಾರ್ಟಿ ಎಂದು ಕುಟುಕಿದರು. ಇನ್ನೂ ರಾಜಸ್ಥಾನ ಬಿಜೆಪಿ ಯಲ್ಲಿ ಭಿನ್ನಮತ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಅದು ಎಲ್ಲವೂ ಸುಳ್ಳು, ವಸುಂಧರಾ ರಾಜೆ ಸೇರಿ ಎಲ್ಲರೂ ನನ್ನ ಸಂಪರ್ಕದಲ್ಲಿದ್ದಾರೆ.
ಎಲ್ಲರೂ ನನ್ನೊಂದಿಗೆ ನೇರ ಸಂಪರ್ಕದಲ್ಲಿದ್ದಾರೆ. ಬಿಜೆಪಿ ರಾಷ್ಟ್ರೀಯ ನೇತೃತ್ವದಲ್ಲಿ ತೀರ್ಮಾನ ಆಗುತ್ತದೆ. ಈ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರುತ್ತಾರೆ. ಈಗ ರಾಜ್ಯದ ಸುವರ್ಣ ವಿಧಾನಸೌಧದ ಸಾವರಕರ್ ಫೋಟೋ ವಿಚಾರದಲ್ಲಿ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಅಭಿನಂದನೆ ಸಲ್ಲುಸುತ್ತೇನೆ. ಸಾವರಕರ ಫೋಟೋ ವಿಷಯದಲ್ಲಿ ವಿಧಾನಸಭೆ ಸ್ಪೀಕರ್ ನಿಲುವಿಗೆ ಅಭಿನಂದಿಸುತ್ತೇನೆ. ನಾನು ಕಿತ್ತು ಒಗೆಯಲು ಬಂದಿಲ್ಲ ಜೋಡಿಸಲು ಬಂದಿದ್ದೇನೆ ಎಂದಿದ್ದಾರೆ. ಈ ನಿಲುವು ಹಾಗೆಯೇ ಇರಬೇಕು ಆಗ ಸದನ ಯಾವುದೇ ವಿವಾದ ಇಲ್ಲದೇ ನಡೆಯುತ್ತದೇ. ವಿಚಾರಧಾರೆ ಒಪ್ಪುವುದು ಬಿಡುವುದು ನಿಮಗೆ ಬಿಟ್ಟಿದ್ದು,
ಆದರೆ ಸಾವರಕರ ವಿಚಾರಧಾರೆ ಅನುಸರಿಸುವವರು ಅನೇಕರಿದ್ದಾರೆ. ಹೀಗಾಗಿ ಅಂಥ ವಿಚಾರಧಾರೆಯವರ ಫೋಟೋ ಕಿತ್ತು ಒಗೆಯುತ್ತೇನೆ ಎನ್ನುವುದು ಅಂಹಕಾರ. ಸನಾತನ ಧರ್ಮದ ವಿರುದ್ಧ ಉದಯನಿಧಿ ಸ್ಟಾಲಿನ್ ಹೇಳಿಕೆ ಕೊಟ್ಟಿದ್ದರು, ಅದಕ್ಕೆ ಕಾಂಗ್ರೆಸ್ ಬೆಂಬಲಿಸಿತ್ತು. ಅದರ ಪರಿಣಾಮ ಮೂರು ರಾಜ್ಯದಲ್ಲಿ ಅನುಭವಿಸಿದ್ದಾರೆ.
ಈಗ ಪ್ರಿಯಾಂಕ ಖರ್ಗೆ ಅಂತಹ ಮಾತುಗಳನ್ನು ಹೇಳುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ಜನ ಇನ್ನೂ ಹೆಚ್ಚು ಇವರನ್ನು ಅರ್ಥ ಮಾಡಿಕೊಳ್ಳುತ್ತಾರೆ. ನೆಹರೂ ವಿಚಾರಗಳ ಬಗ್ಗೆ ನಮಗೆ ಭಿನ್ನಾಭಿಪ್ರಾಯ ಇದೆ. ಹಾಗಂತ ನಾವು ನೆಹರೂ ಫೋಟೊ ತೆಗೆಯುತ್ತೇನೆ ಎನ್ನಲಾಗುತ್ತದಾ?, ನೆಹರುರನ್ನು ಒಪ್ಪುವವರು ಅನೇಕರಿದ್ದಾರೆ. ಹೀಗಾಗಿ ಫೋಟೋ ತೆಗೆಯುವ ವಿಚಾರ ಸರಿಯಲ್ಲ ಎಂದು ಪ್ರಿಯಾಂಕ್ ಖರ್ಗೆಯವರಿಗೆ ಟಾಂಗ್ ನೀಡಿದರು.