10ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಬೆಂಗಳೂರು ಎಫ್ಸಿ 4ನೇ ಸೋಲು ಅನುಭವಿಸಿದೆ. ನಗರದ ಕಂಠೀರವ ಸ್ಟೇಡಿಯನಲ್ಲಿ ನಡೆದ ಮುಂಬೈ ಸಿಟಿ ಎಫ್ಸಿ ವಿರುದ್ದದ ಪಂದ್ಯದಲ್ಲಿ 0-4 ಅಂಕಗಳಿಂದ ಪರಾಭವಗೊಂಡಿತು.
ಬಿಎಫ್ಸಿ ಸದ್ಯ 9 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಗೆದ್ದಿದ್ದು 7 ಅಂಕಗಳೊಂದಿಗೆ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಅತ್ತ ಮುಂಬೈ ಸಿಟಿ ಎಫ್ಸಿ 6 ಪಂದ್ಯಗಳಲ್ಲಿ 4ನೇ ಜಯದೊಂದಿಗೆ 14 ಅಂಕ ಸಂಪಾದಿಸಿದೆ.