ಮೂಲವ್ಯಾಧಿಯ ರೋಗಿಗಳು ದಿನವೂ ಈರುಳ್ಳಿಯನ್ನು ಅಥವಾ ಮೂಲಂಗಿಯನ್ನು ಹಸಿಯಾಗಿ ತಿನ್ನುವುದರಿಂದ ಲಾಭವಾಗುತ್ತದೆ. ಬೇರುಸಹಿತ ಗರಿಕೆ ಹುಲ್ಲನ್ನು ಸಣ್ಣದಾಗಿ ಕತ್ತರಿಸಿ, ಕುಟ್ಟಿ ಹಿಂದಿನ ರಾತ್ರಿ ತಣ್ಣೀರಿನಲ್ಲಿ ನೆನೆ ಹಾಕಿ, ಬೆಳಿಗ್ಗೆ ಅದನ್ನು ಕಿವುಚಿ ಶೋಧಿಸಿ ಕುಡಿಯುವುದರಿಂದ ಮೂಲವ್ಯಾಧಿ ಗುಣವಾಗುತ್ತದೆ.
ಅಮೃತಬಳ್ಳಿಯ ಸತ್ವಕ್ಕೆ ಸಮಾಂಶ ಕಲ್ಲುಸಕ್ಕರ ಪುಡಿ ಮಾಡಿ ಸೇರಿಸಿ; 48 ದಿನಗಳು ಸೇವಿಸುವುದರಿಂದ ಮೂಲವ್ಯಾಧಿ ಪರಿಹಾರವಾಗುತ್ತದೆ. ಬಸಳೆಸೊಪ್ಪನ್ನು ಪಲ್ಯ ಮಾಡಿ ಪ್ರತಿದಿನವೂ ಸೇವಿಸುವುದರಿಂದದ ಮೂಲವ್ಯಾಧಿಯು ಗುಣವಾಗುತ್ತದೆ.
ಮೇಕೆ ಹಾಲನ್ನು ನಿತ್ಯವೂ ಸೇವಿಸಿದರೆ ಮಲಬದ್ಧತೆ, ಮೂಲವ್ಯಾಧಿ ಗುಣವಾಗುತ್ತದೆ. ಕರಿಬೇವಿನ ಎಲೆ ಎಲೆಗಳನ್ನು ಜೇನುತುಪ್ಪದೊಂದಿಗೆ ತಿನ್ನುವುದರಿಂದಲೂ ಮೂಲವ್ಯಾಧಿಯನ್ನು ದೂರಗೊಳಿಸಬಹುದು. ದಿನವೂ ಮಲಗುವ ಮುನ್ನ ಏಲಕ್ಕಿಪುಡಿಯೊಂದಿಗೆ ಬಾಳೆಹಣ್ಣನ್ನು ಸೇವಿಸುವುದರಿಂದ ಮೂಲವ್ಯಾಧಿ ದೂರವಾಗುವುದು.
ಮೂಲವ್ಯಾಧಿಯಿಂದ ರಕ್ತಸ್ರಾವಕ್ಕೆ ಹೊನೆಗೊನೆ ಸೊಪ್ಪಿನ ರಸಕ್ಕೆ ಸಮಪ್ರಮಾಣದಲ್ಲಿ ಕ್ಯಾರೆಟ್ ರಸವನ್ನು ಸೇರಿಸಿ ಸೈಂಧವ ಲವಣವನ್ನು ಅತಿ ಕನಿಷ್ಠ ಪ್ರಮಾಣದಲ್ಲಿ ಸೇರಿಸಿ, ಬಳಸಿದರೆ ಮೂಲವ್ಯಾಧಿಯಲ್ಲಿ ಉಂಟಾಗುವ ರಕ್ತಸ್ರಾವ ನಿಲ್ಲುವುದು.
ಮೊಸರಿಗೆ ಅನ್ನ ಬೆಲ್ಲ ಸೇರಿಸಿ ಊಟ ಮಾಡಿದರೆ, ಮೂಲವ್ಯಾಧಿ ಗುಣವಾಗುತ್ತದೆ.