ಬೆಂಗಳೂರಿನ ಒರಿಯನ್ ಮಾಲ್ನಲ್ಲಿ ನಂದಿ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿದೆ.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ನಟ ರವಿಚಂದ್ರನ್, ರಿಷಬ್ ಶೆಟ್ಟಿ, ಧ್ರುವ ಸರ್ಜಾ ಇನ್ನೂ ಹಲವು ತಾರೆಯರು ಭಾಗಿಯಾಗಿದ್ದಾರೆ. ಜೊತೆಗೆ ಹಿರಿಯ ನಟ ಶ್ರೀನಾಥ್, ನಟಿ ಪ್ರೇಮ, ವಿನೋದ್ ರಾಜ್, ಅನುಪ್ರಭಾಕರ್, ಉಮಾಶ್ರೀ ಇನ್ನೂ ಹಲವು ನಟ-ನಟಿಯರು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇದು ಮೊದಲ ನಂದಿ ಫಿಲಂ ಅವಾರ್ಡ್ ಆಗಿದ್ದು ಅದ್ಧೂರಿಯಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ನಟ ರವಿಚಂದ್ರನ್ ಮಾತನಾಡಿ, ‘ನಂದಿ ಪ್ರಶಸ್ತಿ ನೀಡುತ್ತಿರುವುದು ಬಹಳ ಖುಷಿಯಾಗಿದೆ. ಪ್ರಶಸ್ತಿ ಬಹಳ ಭಾರವಾಗಿದೆ ಅದು ನನಗೆ ಖುಷಿ ಕೊಟ್ಟಿತು, ನನ್ನಂಥಹಾ ಶಿವ ಭಕ್ತನಿಂದ ನಂದಿ ಪ್ರಶಸ್ತಿ ಕೊಡಿಸುತ್ತಿದ್ದೀರ. ಎಲ್ಲರ ಮನೆಗಳಿಗೂ ನಂದಿ ಸೇರುತ್ತದೆ ಎಂಬುದು ನನಗೆ ಖುಷಿ’ ಎಂದರು. ನಟ ಶ್ರೀನಾಥ್ ಅವರಿಗೆ ಜೀವನಮಾನ ಸಾಧನೆಗೆ ಲೈಫ್ ಟೈಮ್ ಅಚೀವ್ಮೆಂಟ್ ಅವಾರ್ಡ್ ನೀಡಲಾಯ್ತು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿಕಟ ಪೂರ್ವ ಅಧ್ಯಕ್ಷರಾದ ಭಾ.ಮಾ.ಹರೀಶ್, ನಿರ್ಮಾಪಕ ನಿತ್ಯಾನಂದ ಪ್ರಭು, ಪದ್ಮಾವತಿ ಚಂದ್ರಶೇಖರ್ ಹಾಗೂ ಅನಿತಾ ರೆಡ್ಡಿ ಈ ಪ್ರಶಸ್ತಿ ಸಂಸ್ಥಾಪರಾಗಿದ್ದು, ಭಾ.ಮಾ.ಗಿರೀಶ್, ಹರ್ಷಿತಾ, ನಂದಿತಾ ಹಾಗೂ ಆಶೋಕ್ ಡೈರೆಕ್ಟರ್ಸ್ ಗಳಾಗಿದ್ದಾರೆ.
ಚೊಚ್ಚಲ ನಂದಿ ಪ್ರಶಸ್ತಿ ಪಡೆದವರ ಪಟ್ಟಿ
1. ಬೆಸ್ಟ್ ಬಯೋಪಿಕ್ ಅವಾರ್ಡ್; ವಿಜಯಾನಂದ
2. ಲೆಜೆಂಡರಿ ಆಕ್ಟ್ರೆಸ್ ಅವಾರ್ಡ್; ಲೀಲಾವತಿ
3.ಜೀವಮಾನ ಸಾಧನೆ ಪ್ರಶಸ್ತಿ; ನಟ ಶ್ರೀನಾಥ್ ಹಾಗೂ ಭಾರತಿ ವಿಷ್ಣುವರ್ಧನ್.
4. ಅತ್ಯುತ್ತಮ ಡಾಕ್ಯುಮೆಂಟ್ರಿ ಪ್ರಶಸ್ತಿ; ಗಂಧದಗುಡಿ
5. ಅತ್ಯುತ್ತಮ ಚೊಚ್ಚಲ ನಟ; ವಿಕ್ರಮ್ ರವಿಚಂದ್ರನ್ (ತ್ರಿವಿಕ್ರಮ್)
6. ಅತ್ಯುತ್ತಮ ಚೊಚ್ಚಲ ನಟಿ: ರೀಷ್ಮಾ ನಾಣಯ್ಯ (ಏಕ್ಲವ್ ಯಾ)
7. ಅತ್ಯುತ್ತಮ ಹಾಸ್ಯನಟ: ರಂಗಾಯಣ ರಘು (ಫ್ಯಾಮಿಲಿ ಪ್ಯಾಕ್)
8. ಅತ್ಯುತ್ತಮ ಹಾಸ್ಯ ನಟಿ: ಹೇಮಾದತ್ (ತೋತಾಪುರಿ)
9. ಅತ್ಯುತ್ತಮ ಪೋಷಕ ನಟಿ- ವೀಣಾ ಸುಂದರ್ (ತೋತಾಪುರಿ)
10. ಅತ್ಯುತ್ತಮ ನಟ ಕ್ರಿಟಿಕ್- ಸಂಚಾರಿ ವಿಜಯ್ (ತಲೆದಂಡ)
11. ಅತ್ಯುತ್ತಮ ಸಂಭಾಷಣೆಕಾರ ಮಾಸ್ತಿ (ಗುರು ಶಿಷ್ಯರು)
12. ಅತ್ಯುತ್ತಮ ಚಿತ್ರ- 777 ಚಾರ್ಲಿ
13. ಅತ್ಯುತ್ತಮ ನಿರ್ದೇಶಕ- ರಿಷಬ್ ಶೆಟ್ಟಿ (ಕಾಂತಾರ)
14. ಅತ್ಯುತ್ತಮ ನಟ- ರಿಷಬ್ ಶೆಟ್ಟಿ (ಕಾಂತಾರ)
15. ಅತ್ಯುತ್ತಮ ನಟಿ- ಸಪ್ತಮಿ ಗೌಡ (ಕಾಂತಾರ)
16. ಅತ್ಯುತ್ತಮ ಖಳನಟ- ಡಾಲಿ ಧನಂಜಯ್ (ಹೆಡ್ ಬುಷ್)