ಧಾರವಾಡ :- ಪೊಲೀಸ್ ಠಾಣೆಯ ಕೂಗಳತೆ ದೂರಲ್ಲಿಯೇ ಪುಡಾರಿಗಳು ಬಡಿದಾಡಿಕೊಂಡ ಜರುಗಿದೆ. ಧಾರವಾಡ ಸಿಬಿಟಿ ನಿಲ್ದಾಣದ ಬಳಿ ತಡ ರಾತ್ರಿ ನಡೆದ ಘಟನೆಯಲ್ಲಿ ಎರಡು ಗುಂಪುಗಳ ನಡುವೆ ಫೈಟ್ ನಡೆದಿದೆ.
ಘಟನೆ ನಡೆದ ಸ್ಥಳದಿಂದ 350 ಮೀಟರ್ ಅಂತರದಲ್ಲಿ ಶಹರ ಪೊಲೀಸ್ ಠಾಣೆ ಇದ್ದು, ಪುಡಾರಿಗಳ ಬಡಿದಾಟ ನೋಡಿ ಸ್ಥಳೀಯ ವ್ಯಾಪಾರಸ್ಥರು ಬೆಚ್ಚಿ ಬಿದ್ದಿದ್ದಾರೆ. ಹಿರಿಯ ನಾಗರಿಕರು ಜಗಳ ಬೀಡಿಸಲು ಹೋದರು ಪುಡಾರಿಗಳು ಕ್ಯಾರೆ ಎನ್ನುತ್ತಿಲ್ಲ. ಬಡಿದಾಟದ ದೃಶ್ಯ ಸ್ಥಳೀಯರ ಮೊಬೈಲ ಕ್ಯಾಮೆರದಲ್ಲಿ ಸೆರೆಯಾಗಿದೆ.
ಪೊಲೀಸ್ ಠಾಣೆ ಹತ್ತಿರದಲ್ಲೇ ಇದ್ದರು ಯುವಕರು ಭಯವಿಲ್ಲದೆ ಬಡಿದಾಡಿದ್ದಾರೆ. ಯಾವುದೇ ಪ್ರಾಣ ಹಾನಿ ವರದಿಯಾಗಿಲ್ಲ.ಘಟನೆಯಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯವಾಗಿರುವ ಶಂಕೆ ವ್ಯಕ್ತವಾಗಿದೆ. ಧಾರವಾಡ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ಜರುಗಿದೆ. ಬಡಿದಾಡಿಕೊಂಡ ಪುಡಾರಿಗಳು ಯಾರು ಎಂಬುವುದ ಪೊಲೀಸರ ತನಿಖೆ ಬಳಿಕ ತಿಳಿಬೇಕಾಗಿದೆ.