ಕಲಬುರ್ಗಿ:– ಪಿಎಸ್ಐ ಹಗರಣಕ್ಕೆ ಆರ್.ಡಿ. ಪಾಟೀಲ್ ವಿರುದ್ಧದ ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವು ಮಾಡಲಾಗಿದೆ.
ಕಲಬುರಗಿ ಹೈಕೋರ್ಟ್ ಪೀಠ ಕಿಂಗ್ಪಿನ್ ಆರ್.ಡಿ. ಪಾಟೀಲ್ (RD Patil) ವಿರುದ್ಧ ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿದೆ. ರಾಜ್ಯದೆಲ್ಲೆಡೆ ತನ್ನ ವಿರುದ್ಧ ದಾಖಲಾದ ಪ್ರಕರಣಗಳನ್ನ ವೀಲಿನಗೊಳಿಸಿ ಒಂದೇ ಕಡೆ ವಿಚಾರಣೆ ನಡೆಸಲು ಆರ್.ಡಿ. ಪಾಟೀಲ್ ಮನವಿ ಮಾಡಿದ್ದರು. ಅಲ್ಲಿವರೆಗೆ ತನ್ನ ವಿರುದ್ಧ ದಾಖಲಾದ ಪ್ರಕರಣಗಳ ತನಿಖೆಗೆ ತಡೆಯಾಜ್ಞೆ ಪಡೆದಿದ್ದರು. ಇದೀಗ ಆರ್.ಡಿ. ಪಾಟೀಲ್ಗೆ ನೀಡಲಾಗಿದ್ದ ತಡೆಯಾಜ್ಞೆಯನ್ನ ಹೈಕೋರ್ಟ್ ತೆರವುಗೊಳಿಸಿದೆ.
ಎಲ್ಲಾ ಎಫ್ಐಆರ್ಗಳಿಗೆ ದಾಖಲಾದ ಪ್ರಕರಣಗಳನ್ನ ಒಂದೇ ಕಡೆ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ಕಿಂಗ್ಪಿನ್ ಆರ್.ಡಿ. ಪಾಟೀಲ್ ಮೇಲ್ಮನವಿಗೆ ಹೈಕೋರ್ಟ್ ಪೀಠ ಪ್ರತಿಕ್ರಿಯೆ ನೀಡಿದೆ. ಸದ್ಯ ತಡೆಯಾಜ್ಞೆ ತೆರವು ಹಿನ್ನಲೆ ಪಿಎಸ್ಐ ಕೇಸ್ ನಲ್ಲೂ ವಿಚಾರಣೆ ಸಾಧ್ಯತೆ ಇದೆ.