ಧಾರವಾಡ:- ಶಾಸಕ ಬಸನಗೌಡಪಾಟೀಲ್ ಯತ್ನಾಳ ವಿರುದ್ಧ ಕಾಂಗ್ರೆಸ್ ಮುಖಂಡ ತಮ್ಮಾಟಗಾರ ಕಿಡಿಕಾರಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಶಾಸಕ ಯತ್ನಾಳರಿಗೆ ಬಿಜೆಪಿಯ ರಾಜ್ಯಾಧ್ಯಕ್ಷ, ವಿರೋಧ ಪಕ್ಷದ ಸ್ಥಾನ ಸಿಕ್ಕಿಲ್ಲ. ಹೀಗಾಗಿ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಯತ್ನಾಳವರು ಹುಚ್ಚರಂತೆ ಮಾತಾಡುತ್ತಿದ್ದಾರೆ. ಅವರಿಗೆ ಮೆಂಟಲ್ ಆಸ್ಪತ್ರೆಯ ಚಿಕಿತ್ಸೆ ಅವಶ್ಯಕತೆ ಇದೆ. ಮುಸ್ಲಿಂ ಧರ್ಮಗುರುಗಳ ಬಗ್ಗೆ ಬೇಕಾಬಿಟ್ಟಿಯಾಗಿ ಮಾತಾಡುತ್ತಿದ್ದಾರೆ
ಮುಸ್ಲಿಂ ಗುರುಗಳಾದ ತನ್ವೀರ್ ಹಾಸ್ಮಿ ಪೀರಾ ಅವರ ಬಗ್ಗೆ ಸೊಸಿಯಲ್ ಮೀಡಿಯಾ, ಮಾಧ್ಯಮ ಮುಂದೆ ಸುಖಾಸುಮ್ಮನೆ ಮಾಡುತ್ತಿದ್ದಾರೆ. ಅವರ ಪಕ್ಷದ ಕೇಂದ್ರ ಸಚಿವರಾದ ಗಡ್ಕರಿಗೂ ಗುರುಗಳಾದ ತನ್ವೀರ ಅವರು ಭೇಟಿಯಾಗಿದ್ದಾರೆ. ಅದರ ಪೋಟೋ ಕೂಡಾ ನಾವು ನೀಡುತ್ತೇವೆ. ಯತ್ನಾಳ ಅವರು ನೀಡಿರುವ ಪೋಟೋ ಅಲ್ ಹಾಸ್ಮಿ ಡಾಟ್ ವರ್ಜ್ ವೆಬಸೈಟ್ನಲ್ಲಿದ್ದು, ವೇಬ್ ಸೈಟಲ್ಲಿ 12 ವರ್ಷ ಹಿಂದಿನ ಪೀರಾ ಗುರುಗಳು ಹಾಕಿರುವ ಪೋಟೊ ಅವು. ದೇಶದಲ್ಲಿನ ಫೇಮಸ್ ದರ್ಗಾದ್ ಹಾಗೇ ಇರಾಕನ ಬಗ್ದಾದ್ ಒಳಗಿನ ಮೆಹಬೂಬ್ ಸುಬಾನಿ ಫೇಮಸ್ ದರ್ಗಾ ಆಗಿದೆ. ದೇಶ ವಿದೇಶಗಳಿಂದ ಯಾತ್ರೆಕರು ಅಲ್ಲಿಗೆ ಹೋಗಿ ಆರ್ಶೀವಾದ ತಗೊಂಡು ಬರುತ್ತಾರೆ. ಹೀಗೆ ಗುರುಗಳಾದ ತನ್ವೀರ್ ಹಾಸ್ಮಿ ಪೀರಾ ಅವರು ಅಲಾ ದರ್ಗಾದ ಗುರುಗಳನ್ನು ಭೇಟಿ ಮಾಡಿ ಮಾದಿದ್ದಾರೆ. ಇದನ್ನೇ ಇಟ್ಕೊಂಡು ನೂರಾರು ಸಮಸ್ಯೆಗಳನ್ನು ಬಿಟ್ಟು ಇದರ ಬಗ್ಗೆ ಸದನದಲ್ಲಿ ಮಾತನಾಡಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಯತ್ನಾಳ ಅವರು ಹುಚ್ಚರ ರೀತಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ದೊಡ್ಡ ಸಮಾಜದ ನಾಯಕರಾಗಿ ಹೋರಾಟಗಳನ್ನು ಮಾಡಿದ್ದಾರೆ. ಅವರ ಹಿರಿಯ ರಾಜಕಾರಣಿ ಅವರು
ಕೇಂದ್ರ ಸಚಿವರಾಗಿದ್ದದವರು ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ. ಉತ್ತರ ಕರ್ನಾಟಕದ ಬಗ್ಗೆ ಸದನದಲ್ಲಿ ಅವರು ಧ್ವನಿ ಎತ್ತಲ್ಲಿ ಅದನ್ನು ಬಿಟ್ಟು ಈ ರೀತಿ ಗೊಂದಲ ಸೃಷ್ಟಿ ಬೇಡಾ ಎಂದು ಧಾರವಾಡದಲ್ಲಿ ಕಾಂಗ್ರೆಸ್ ಮುಖಂಡ ಇಸ್ಮಾಯಲ್ ತಮ್ಮಾಟಗಾರ ವಾಗ್ದಾಳಿ ಮಾಡಿದ್ದಾರೆ.