ಪೀಣ್ಯ ದಾಸರಹಳ್ಳಿ:- ಬೆಂಗಳೂರು ಹೊರಹೊಲಯದ ದಾಸರಹಳ್ಳಿ ಸಮಿಪದ ಸೋಲದೇವನಹಳ್ಳಿ ಬೆಸ್ಕಾಂ N9 ವತಿಯಿಂದ ಸುರಕ್ಷತಾ ಕಾರ್ಯಗಾರ ಜಾಥವನ್ನು ಅಯೋಜಿಸಲಾಗಿತ್ತು ಬೆಸ್ಕಾಂ ಸೋಲದೇವನಹಳ್ಳಿ N9 ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ವಿದ್ಯುತ್ ಸುರಕ್ಷತಾ ಕಾರ್ಯಾಗಾರ ಜಾಥ ಕಾರ್ಯಕ್ರಮಕ್ಕೆ ಜೀತೆಂದ್ರ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಜಾಥ ಕಾರ್ಯಕ್ರಮವನ್ನು ಬಾಗಲಗುಂಟೆ ಸೋಲದೇವನಹಳ್ಳಿ ಚಿಕ್ಕಬಾಣಾವಾರ ಅಚಾರ್ಯ ಕಾಲೇಜ್ ರಸ್ತೆ ಇನ್ನೂ ಮುಂತಾದ ಕಡೆ ಜಾಥ ಮಾಡಿದ್ದರು. “ನಿಮ್ಮ ಸುರಕ್ಷತೆ, ನಿಮ್ಮ ಜೀವ, ನಿಮ್ಮ ಕೈಯಲ್ಲಿದೆ. ಇದನ್ನು ಅರಿತು ಬೆಸ್ಕಾಂ ನೌಕರರು ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡು ಕರ್ತವ್ಯ ನಿರ್ವಹಿಸಬೇಕು” ಸುರಕ್ಷತೆಯ ನಮ್ಮ ಆದ್ಯತೆ ಸುರಕ್ಷತೆಯ ನಮ್ಮ ದ್ಯೆಯ ದೋರಣೆ ಸುರಕ್ಷಿತವಾಗಿ ಸಾರ್ವಜನಿಕರು ಮತ್ತು ನಮ್ಮ ಎಲ್ಲ ಸಿಬ್ಬಂದಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾರ್ವಜನಿಕರನ್ನು ಸುರಕ್ಷಿತವಾಗಿ ಇಡಲು ಸುರಕ್ಷತಾ ಕಾರ್ಯಗಾರವನ್ನ ಹಮ್ಮಿಕೊಂಡಿದ್ದೇವೆ, ಉನ್ನತ ಅಧಿಕಾರಿಗಳು ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರನ್ನು ಒಗ್ಗೂಡಿಸಿ ಸಾರ್ವಜನಿಕರಿಗೆ ಕೆಲವು ವಿಷಯಗಳನ್ನ ತಲುಪಿಸಲು ಅವರಿಗೆ ಅರಿವು ಮೂಡಿಸುವ ಮತ್ತು ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳುವ ಕೆಲವೊಂದು ವಿಚಾರಗಳನ್ನ ತಿಳಿಸುವ ನಿಟ್ಟಿನಲ್ಲಿ ಈ ಒಂದು ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ .
ಸಿಬ್ಬಂದಿಗಳಿಗೆ ನಿಮ್ಮ ವ್ಯಾಪ್ತಿಯಲ್ಲಿ ಯಾವುದೇ ಸಮಸ್ಯೆ ಬಗೆಹರಿಸಲು ತೆರಳುವಾಗ ಕನಿಷ್ಟ ಇಬ್ಬರು ಅಥವಾ ಮೂರು ಮಂದಿ ಸಿಬ್ಬಂದಿ ತೆರಳಬೇಕು.ಯಾವುದೇ ಕಾರಣಕ್ಕೂ ಒಬ್ಬರು ತೆರಳಬೇಡಿ. ಬೆಸ್ಕಾಂ ಒದಗಿಸಿರುವ ಎಲ್ಲ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಸುರಕ್ಷತೆಗೆ ಒತ್ತು ನೀಡಿ ಕಾರ್ಯನಿರ್ವಹಿಸಿ ಎಂದು ಕಾರ್ಯ ನಿರ್ವಾಹಕ ಇಂಜಿನಿಯರ್ ಜಿತೇಂದ್ರ ಕುಮಾರ್ ಕಿವಿಮಾತು ಹೇಳಿದರು.ಇದೇ ಸಂದರ್ಭದಲ್ಲಿ ಬೆಸ್ಕಾಂ ಅಧಿಕಾರಿಗಳು ಸಿಬ್ಬಂದಿಗಳು ಭಾಗವಹಿಸಿದ್ದರು.