ಬೆಂಗಳೂರು :- ಸೋಷಿಯಲ್ ಮೀಡಿಯಾದಲ್ಲಿ ಹವಾ ಇಟ್ಟ ದಾಸ ಕಿಂಗ್ ಮೇಕರ್ ನನ್ನು ಅರೆಸ್ಟ್ ಮಾಡಲಾಗಿದೆ.
ದೊಡ್ಡ ದೊಡ್ಡವರ ಜತೆ ಫೋಟೊ ಹೊಡೆಸಿಕೊಳ್ಳೋದು, ಸಾಕಷ್ಟು ಜನ ಫಾಲೋವರ್ಸ್ ನಡುವೆ ತಾನೊಬ್ಬ ದೊಡ್ಡ ಮನುಷ್ಯ ಅಂದುಕೊಂಡಿದ್ದ ದಾಸನನ್ನು ಪೊಲೀಸರು ಬಂಧಿಸಿದ್ದಾರೆ. ಆಸ್ತಿ ಜಗಳದಲ್ಲಿ ಮೂಗು ತೂರಿಸಲು ಹೋಗಿ ಆತ ಈಗ ಕಂಬಿ ಎಣಿಸುತ್ತಿದ್ದಾನೆ.
ಬೇರೆಯವರ ಪ್ರಾಪರ್ಟಿ ಗಲಾಟೆಗೆ ಮಧ್ಯ ಪ್ರವೇಶ ಮಾಡಿದ್ದಲ್ಲದೆ ತನ್ನ ಯುವಕರನ್ನು ಕಳುಹಿಸಿಕೊಟ್ಟ ಆರೋಪದಲ್ಲಿ ಆತನನ್ನು ಬಂಧಿಸಲಾಗಿದೆ. ಮಹಿಳೆ ಹಾಗೂ ಒಬ್ಬ ವ್ಯಕ್ತಿ ನಡುವೆ ಜಾಗದ ಗಲಾಟೆ ಇತ್ತು. ಆ ವ್ಯಕ್ತಿ ಇದನ್ನು ಇತ್ಯರ್ಥ ಮಾಡಿಕೊಡುವಂತೆ ದಾಸನ ಮೊರೆ ಹೊಕ್ಕಿದ್ದ.
ದಾಸ ಮೊದಲೇ ಮಂಗನಿಗೆ ಕಳ್ಳು ಕುಡಿಸಿದಂತಾಗಿದೆ. ಅವನು ತನ್ನ ಹುಡುಗರನ್ನು ಕರೆದು ʻಆ ಮಹಿಳೆಯನ್ನು ನೋಡ್ಕೊಳ್ರೊʼ ಎಂದು ಆದೇಶ ಕೊಟ್ಟಿದ್ದಾನೆ. ಆ ಹುಡುಗರು ನೇರವಾಗಿ ಹೋಗಿ ಮಹಿಳೆಗೆ ಬೆದರಿಕೆ ಹಾಕಿದ್ದಾರೆ. ಮತ್ತು ಹಲ್ಲೆ ಕೂಡಾ ಮಾಡಿದ್ದಾರೆ.
ಹಲ್ಲೆಗೊಳಗಾದ ಮಹಿಳೆ ದಾಸನ ಯುವಕರು ಬಂದು ಅಟ್ಯಾಕ್ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಸಂಬಂಧ ಪ್ರಕರಣ ದಾಖಲಿಸಿಕೊಂಡ ಯಲಹಂಕ ಪೊಲೀಸರು ತನಿಖೆ ಕೈಗೆತ್ತಿಕೊಂಡು ದಾಸನನ್ನು ಬಂಧಿಸಿದ್ದಾರೆ.