ತುಮಕೂರು:- ಆರೋಗ್ಯ ಇಲಾಖೆ ಕುಟುಂಬ ಕಲ್ಯಾಣ ಇಲಾಖೆಯು ಮಧುಗಿರಿಯಲ್ಲಿ ಮೃತ ವ್ಯಕ್ತಿಯ ಹೆಸರಿಗೆ ಅಂಗವಿಕಲ ಹಾಗೂ ವಯಸ್ಸಿನ ಧೃಡೀಕರಣ ಪತ್ರ ನೀಡಿದ ಆರೋಪಿ ವೈದ್ಯರನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.
ಫಿಜಿಷಿಯನ್ ಡಾ.ಬಿ.ಪುರುಷೋತ್ತಮ ಅಮಾನತ್ತುಗೊಂಡ ವೈದ್ಯರು. ಈ ಇಬ್ಬರೂ ವೈದ್ಯರು ಹಣ ಪಡೆದು ಸುಳ್ಳು ಪ್ರಮಾಣಪತ್ರ ನೀಡಿದ್ದ ಬಗ್ಗೆ 2022 ಡಿ.27ರಂದು ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮುಖ್ಯ ಜಾಗೃತಾಧಿಕಾರಿಗಳ ತನಿಖಾ ವರದಿಯಲ್ಲಿ ಆರೋಪ ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ಶಿಸ್ತು ಕ್ರಮ ಬಾಕಿ ಇರಿಸಿ ಇಬ್ಬರೂ ವೈದ್ಯರನ್ನು ಸೇವೆಯಿಂದ ಅಮಾನತುಗೊಳಿಸಿ ಅಮಾನತುಗೊಳಿಸಲಾಗಿದೆ.
ಅಮಾನತುಗೊಂಡಿರುವ ಡಾ.ಮಹೇಶ್ಸಿಂಗ್ ಅವರನ್ನು ಹಾವೇರಿ ಸವಣೂರು ಸಾರ್ವಜನಿಕ ಆಸ್ಪತ್ರೆಗೆ ಮತ್ತು ಡಾ.ಬಿ. ಪುರುಷೋತ್ತಮ ಅವರ ಲೀನ್ ಅನ್ನು ಕೆಜಿಎಫ್ ಸಾರ್ವಜನಿಕ ಆಸ್ಪತ್ರೆಗೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ.