ನೆಲಮಂಗಲ:-ಧಗಧಗನೆ ಕ್ಯಾಂಟರ್ ಹೊತ್ತಿ ಉರಿದಿರುವ ಘಟನೆ ನೆಲಮಂಗಲ ತಾಲೂಕಿನ ಇಮಚೇನಹಳ್ಳಿ ಬಳಿ ಜರುಗಿದೆ.
ವಿದ್ಯುತ್ ತಂತಿ ತಗುಲಿ ಬೆಂಕಿ ಅವಘಡ ಸಂಭವಿಸಿದ್ದು, ಭಾರೀ ಅನಾಹುತ ತಪ್ಪಿದೆ. ರಾಗಿ ಹುಲ್ಲು ತುಂಬಿಕೊಂಡು ಹೋಗುತ್ತಿದ್ದ ಲಾರಿಗೆ ಬೆಂಕಿ ಬಿದ್ದಿತ್ತು ಎನ್ನಲಾಗಿದೆ. ನೆಲಮಂಗಲ ತಾಲೂಕಿನ ಇಮಚೇನಹಳ್ಳಿ ಬಳಿ ಘಟನೆ ಜರುಗಿದೆ.
ಕ್ಯಾಂಟರ್ ವಾಹನ ಹಾಗೂ ರಾಗಿ ಹುಲ್ಲು ಸಂಪೂರ್ಣವಾಗಿ ಭಸ್ಮವಾಗಿದ್ದು, ಪ್ರಾಣಪಾಯದಿಂದ ಚಾಲಕ ಹಾಗೂ ಕ್ಲಿನರ್ ಪಾರಾಗಿದ್ದಾರೆ. ಡಾಬಸ್ ಪೇಟೆ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಘಟನೆ ಜರುಗಿದೆ.