ನೆಲಮಂಗಲ:- ಎಟಿಎಂನ ಹಣ ಕಳ್ಳತನ ಮಾಡಲು ಬಂದಿದ್ದ ಇಬ್ಬರು ಖದೀಮರು ಸಿಬ್ಬಂದಿಯ ಅಲರ್ಟ್ ಕರೆಯಿಂದ ಓಡಿ ಹೋಗಿದ್ದು ಎಂಟಿಎಂನಲ್ಲಿದ್ದ 7 ಲಕ್ಷ ಹಣ ಬೆಂಕಿಗಾಹುತಿಯಾಗಿದೆ.
ಬೆಂಗಳೂರು ಹೊರವಲಯದ ನೆಲಮಂಗಲ ಸಮೀಪದ ಅರಿಶಿನಕುಂಟೆಯ ರಾಷ್ಟ್ರೀಯ ಹೆದ್ದಾರಿ ಸಮೀಪದ ಆಕ್ಸಿಸ್ ಬ್ಯಾಂಕ್ ಎಂಟಿಎಂನ ಹಣವನ್ನು ಇಬ್ಬರು ಖದೀಮರು ಕಳ್ಳತನ ಮಾಡಲು ಮುಂದಾಗಿದ್ದು ಗ್ಯಾಸ್ ಕಟರ್ ಬಳಸಿ ಎಂಟಿಮ್ ಮಿಷನ್ ಕಟ್ ಗೆ ಯತ್ನಿಸಿದ್ದಾರೆ.
ಅರ್ಧದಷ್ಟು ಕಟ್ ಮಾಡಿದಾಗ ಬ್ಯಾಂಕ್ ಸಿಬ್ಬಂದಿಗೆ ಮಾಹಿತಿ ಹೋದಾಗ ಬ್ಯಾಂಕ್ ಸಿಬ್ಬಂದಿಗಳು ಬ್ಯಾಂಕ್ ಕಟ್ಟಡ ಮಾಲೀಕರಿಗೆ ಕರೆ ಮಾಡಿ ಪರಿಶೀಲಿಸಲು ಹೇಳಿದ್ದಾರೆ, ತಕ್ಷಣ ಮಾಲೀಕರು ಲೈಟ್ ಹಾಕುತ್ತಿದ್ದಂತೆ ಖದೀಮರು ಎಸ್ಕೇಪ್ ಆಗಿದ್ದು ತಕ್ಷಣ ಟೌನ್ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ.
ಖದೀಮರ ಕಳ್ಳತನ ಯೋಜನೆ ಬ್ಯಾಂಕ್ ಸಿಬ್ಬಂದಿಯ ಕರೆ ವಿಫಲಗೊಳಿಸಿದೆ. ಎಂಟಿಎಮ್ ನಲ್ಲಿ 30 ಲಕ್ಷ ನಗದನ್ನು ಹಾಕಲಾಗಿತ್ತು, ಗ್ಯಾಸ್ ಕಟರ್ ಬಳಸಿ ಕಟ್ ಮಾಡಿದ್ದ ಹಿನ್ನಲೆ 7 ಲಕ್ಷದಷ್ಟು ನಗದು ಹಣ ಬೆಂಕಿಗಾಹುತಿಯಾಗಿದ್ದು ಉಳಿದ ಹಣವನ್ನು ಬ್ಯಾಂಕ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಎಂಟಿಎಂ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಖದೀಮರ ಓಡಾಟ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನೆಲಮಂಗಲ ಟೌನ್ ಪೋಲಿಸರು ಕೇಸನ್ನು ದಾಖಲಿಸಿಕೊಂಡು ಕಳ್ಳರ ಬಲೆಗೆ ಬಲೆ ಬೀಸಿದ್ದಾರೆ.