ಉತ್ತರ ಪ್ರದೇಶ :-ತಾಯಿ ಬುದ್ದಿ ಮಾತು ಹೇಳಿದ್ದಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರಪ್ರದೇಶದ ಮಥುರಾದಲ್ಲಿ ನಡೆದಿದೆ. ಆತ್ಯಹತ್ಯೆಗೆ ಶರಣಾದ 13 ವರ್ಷ ವಯಸ್ಸಿನ ಬಾಲಕಿಯನ್ನು ಖುಷಿ ಶರ್ಮಾ ಎಂದು ಗುರುತಿಸಲಾಗಿದ್ದು, ಆಕೆಗೆ ಶಾಲೆಗೆ ಹೋಗಲು ಇಷ್ಟವಿರಲಿಲ್ಲ.
ಇದರಿಂದ ಕುಪಿತಗೊಂಡ ಆಕೆಯು ತಾಯಿ ಮಗಳು ಶಾಲೆಗೆ ಹೋಗುವಂತೆ ಒತ್ತಾಯಿಸಿ, ಗದರಿಸಿದ್ದಾರೆ. ತದನಂತರ ಕಪಾಳಮೋಕ್ಷ ಕೂಡ ಮಾಡಿದ್ದಾರೆ. ಇದರಿಂದ ತೀವ್ರ ಮನನೊಂದ ಶರ್ಮಾ ಅವರ ಪುತ್ರಿ ಖುಷಿ, ಶಾಲೆಗೆ ಹೋಗುವ ಬದಲು ಅಲ್ವಾರ್-ಮಥುರಾ ರೈಲ್ವೇ ಟ್ರ್ಯಾಕ್ ಬಳಿ ಹೋಗಿ ರೈಲಿನ ಮುಂದೆ ಜಿಗಿದಿದ್ದಾಳೆ.
ಘಟನೆಯನ್ನು ಕಂಡ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆಕೆಯ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಖುಷಿ ತನ್ನ ತಾಯಿ ಬೈದು, ಗದರಿದ್ದಕ್ಕೆ ಮನನೊಂದು ಆತ್ಯಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಂಬಲಾಗಿದೆ.