ಬೆಂಗಳೂರು:- ಹಾಡಹಗಲೇ ಮನೆ ಬೀಗಮುರಿದು ಕಳ್ಳತನ ಮಾಡುತ್ತಿದ್ದ ಇಬ್ಬರು ಖದೀಮರನ್ನು ಅರೆಸ್ಟ್ ಮಾಡಲಾಗಿದೆ. ನಾಗರಾಜ್ ಅಲಿಯಾಸ್ ಡೈಮಂಡ್ ನಾಗ ಹಾಗೂ ತ್ರಿವೇಣ ಕುಮಾರ್ ಬಂಧಿತರು.
ಆರೋಪಿಗಳಿಂದ ₹24.5 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಾಲ್ಕು ಬೈಕ್ಗಳು ಸೇರಿದಂತೆ ₹28 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ನಗರದ ಹೊರವಲಯ ಜನ ಸಂಚಾರ ವಿರಳ ಇರುವ ವಸತಿ ಪ್ರದೇಶಗಳಲ್ಲಿ ಸಂಚರಿಸಿ ಮನೆಗಳ ಬೀಗ ಮುರಿದು ಆರೋಪಿಗಳು ಕಳ್ಳತನ ಮಾಡುತ್ತಿದ್ದರು.
ಇತ್ತೀಚೆಗೆ ಸಿಂಗಾಪುರದ ವರದರಾಜಸ್ವಾಮಿ ಲೇಔಟ್ನಲ್ಲಿ ಜಿ.ಅನೂಷಾ ಅವರ ಮನೆ ಬೀಗ ಮುರಿದು 452 ಗ್ರಾಂ ಚಿನ್ನದ ಒಡವೆ ಹಾಗೂ ₹30 ಸಾವಿರ ನಗದು ದೋಚಿದ್ದರು. ಈ ಬಗ್ಗೆ ತನಿಖೆಗಿಳಿದ ಇನ್ಸ್ಪೆಕ್ಟರ್ ಸಿ.ಬಿ.ಶಿವಸ್ವಾಮಿ ನೇತೃತ್ವದ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.