ನಟಿ ಲೀಲಾವತಿ ಅವರು 70ರ ದಶಕದಲ್ಲಿ ಮಿಂಚಿದ ಖ್ಯಾತ ನಟಿಯರ ಸಾಲಿನಲ್ಲಿ ಒಬ್ಬರಾಗಿದ್ದಾರೆ.
ಹಿರಿಯ ನಟಿ ಲೀಲಾವತಿ ಅವರು ದಕ್ಷಿಣ ಭಾರತದ ಜನಪ್ರಿಯ ನಟಿಯಾಗಿದ್ದಾರೆ. ಲೀಲಾವತಿ ಅವರು ಕನ್ನಡ ಅಷ್ಟೇ ಅಲ್ಲದೆ ತಮಿಳು, ತೆಲಗು ಮತ್ತು ಮಲಯಾಳಂ ಭಾಷೆ ಸೇರಿದಂತೆ ಒಟ್ಟು 600 ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿಯೇ 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಲೀಲಾವತಿ ಅವರು ಸಿನಿಮಾಗಳ ಜತೆಗೆ ವೈಯಕ್ತಿಕ ವಿಚಾರವಾಗಿಯು ಸುದ್ದಿಯಾಗುತ್ತಿದ್ದರು. ಈ ಕುರಿತಾಗಿ ಅವರ ಪುತ್ರ ವಿನೋದ್ ರಾಜ್ ಕುಮಾರ್ ಅವರು ಮಾತನಾಡಿದ್ದಾರೆ.
ಶಿವಣ್ಣ ಅವರು ಯಾವ ರೀತಿ ಸ್ಪಂದನೆ ಮಾಡಿದ್ರು.. ಅದನ್ನು ನೋಡಿ ಬಾಯಿ ಮುಚ್ಚಿಕೊಂಡು ಇರಬೇಕು. ಇದು ಮರ್ಯಾದಸ್ಥರ ಲಕ್ಷಣವಾಗಿದೆ. ಈ ವಿಚಾರವನ್ನು ತಿಳಿಯುವುದರಿಂದ ಏನಾದ್ರು ಜಿಎಸ್ಟಿ ಕಡಿಮೆ ಆಗುತ್ತಾ? ಪೆಟ್ರೋಲ್ ಬೆಲೆ ಕಡಿಮೆ ಆಗುತ್ತಾ? ಯಾವ ಸಮಸ್ಯೆ ಪರಿಹಾರವಾಗುತ್ತದೆ? ಈ ವಿಚಾರ ತಿಳಿಯುವುದರಿಂದ. ಈ ಪ್ರಶ್ನೆ ಮಾಡುವವರು ಅವರ ಮನೆಯನ್ನು ಅವರು ನೋಡಿಕೊಳ್ಳಲಿ.. ಈ ವಿಚಾರ ಯಾಕೆ? ಎಂದು ಪ್ರಶ್ನೆ ಮಾಡುತ್ತಾ ತಂದೆ ಯಾರು ಎಂದು ಕೇಳುವವರ ಕುರಿತಾಗಿ ಆಕ್ರೋಶ ಹೊರ ಹಾಕಿದ್ದಾರೆ.
ಈ ಕುರಿತಾಗಿ ಹಗಲೆಲ್ಲಾ ಅದೇ ಪ್ರಶ್ನೆ ಯಾಕೆ? ನಾನು ನನ್ನ ತಾಯಿಗೆ ಮಾತು ಕೊಟ್ಟಿದ್ದೇನೆ.. ತನ್ನ ತಾಯಿ ಬೇರೆಯವರಿ ಮಾತು ಕೊಟ್ಟಿದ್ದಾರೆ.. ನೀವೆ ಅರ್ಥ ಮಾಡಿಕೊಳ್ಳಿ. ಈ ವಿಚಾರ ನನ್ನ ಜತೆಗೆ ಮಣ್ಣಾಗಲಿ. ಕನ್ನಡಿಗರೇ…ಗುರು ಮೂಲ.. ನದಿ ಮೂಲ ಹುಡುಕಿ ಎನೋ ಮಾಡಿ.. ಮತ್ತೊಂದು ಮಾಡಬೇಡಿ. ನಾನು ಈ ಕುರಿತಾಗಿ ಕಾಮೆಂಟ್ಸ್ ಮಾಡಲ್ಲ.. ನೋ ಕಾಮೆಂಟ್ಸ್ ಎಂದು ಉತ್ತರ ನೀಡಿದ್ದಾರೆ.
ಇನ್ನೂ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ತೋಟದಲ್ಲಿ ಸಾಕಷ್ಟು ವರ್ಷಗಳಿಂದ ತಾಯಿ-ಮಗ ಜೀವನ ನಡೆಸುತಿದ್ದಾರೆ. ಕೃಷಿ ಮಾಡುತ್ತಾ ಬಂದ ಹಣದಲ್ಲಿಯೇ ಸೋಲದೇವನಹಳ್ಳಿಯಲ್ಲಿ ಆಸ್ಪತ್ರೆ, ಪಶು ಆಸ್ಪತ್ರೆಗಳನ್ನು ಕಟ್ಟಿಸಿ ಸಾರ್ವಜನಿಕ ಸೇವೆಗೆ ನೀಡಿದ್ದಾರೆ. ಆದರೆ ಇತ್ತೀಚೆಗೆ ಲೀಲಾವತಿ ಅವರ ಆರೋಗ್ಯದಲ್ಲಿ ವ್ಯತ್ಯಯವಾಗಿದೆ. ನಿತ್ರಾಣರಾಗಿ ಹಾಸಿಗೆ ಹಿಡಿದಿದ್ದಾರೆ. ಹಿರಿಯ ನಟಿಯನ್ನು ಕಾಣಲು ಚಿತ್ರರಂಗದ ಅನೇಕ ಗಣ್ಯರು ವಿನೋದ್ ರಾಜ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ ಎನ್ನಲಾಗುತ್ತಿದೆ.