ಹೀಗೆ… ಗ್ರಾಮದ ನಡು ರಸ್ತೆಯಲ್ಲಿ ರಕ್ತದದೋಕುಳಿ ಹಾಡಿ ಯುವಕನೊರ್ವನನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಯಲ್ಲಂಪಲ್ಲಿ ಗ್ರಾಮದಲ್ಲಿ. ಗ್ರಾಮದ ಗಜೇಂದ್ರ ಎನ್ನುವ ಯುವಕನನ್ನು ಹತ್ಯೆ ಮಾಡಲಾಗಿದೆ. ಮುಚ್ಚು ಮರೆಯಿಲ್ಲದೆ… ಜನಸಂದಣಿ ಜನನಿಬೀಡ ಪ್ರದೇಶದಲ್ಲಿ ತಲೆ ಮುಖ ಕತ್ತುಗೆ ಮಾರಕಾಯುಧದಿಂದ ಕೊಚ್ಚಿ ಕೊಚ್ಚಿ ಕೊಲೆ ಮಾಡಲಾಗಿದೆ. ಅಸಲಿಗೆ ಕ್ಯಾಂಟರ್ ಚಾಲನವಾಗಿ ಚಿಕ್ಕಬಳ್ಳಾಪುರದಲ್ಲಿ ಕೆಲಸ ಮಾಡ್ತಿದ್ದ ಗಜೇಂದ್ರ, ನಿನ್ನೆ ಸ್ವಗ್ರಾಮಕ್ಕೆ ಆಗಮಿಸಿದ್ದ, ತಡ ರಾತ್ರಿ ಮನೆಗೆ ಬರೊ ರಸ್ತೆಯಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿದೆ, ಇದನ್ನು ಕಂಡ ಯಲ್ಲಂಪಲ್ಲಿ ಗ್ರಾಮ ಬೆಚ್ಚಿ ಬಿದ್ದಿದೆ. ಅಸಲಿಗೆ ಗಜೇಂದ್ರನ ತಂದೆ ಸತ್ಯನಾರಾಯಣಶೆಟ್ಟಿ ಮೃತಪಟ್ಟಿದ್ದಾರೆ.
ಇರೊ ತಾಯಿ ವರಲಕ್ಷ್ಮಿಯನ್ನು ಸಾಕುವ ಜವಾಬ್ದಾರಿ ಗಜೇಂದ್ರನ ಮೇಲೆ ಇತ್ತು. ತಾಯಿಯನ್ನು ನೋಡಲು ನಿನ್ನೆ ಊರಿಗೆ ಬಂದಿದ್ದಾನೆ. ಸ್ನೇಹಿತರ ಜೊತೆ ಹೊರಗಡೆ ಹೋಗಿದ್ದ ಗಜೇಂದ್ರ ರಾತ್ರಿ ಮನೆಗೆ ಬರಬೇಕಿತ್ತು, ರಾತ್ರಿ 11.30ರ ಸಮಯದಲ್ಲಿ ತನ್ನ ಅಕ್ಕ ಶಶಿಕಲಾ ಗಂಡ ಈಶ್ವರಪ್ಪಗೆ ಕರೆ ಮಾಡಿ, ಗ್ರಾಮದ ಶ್ರೀನಾಥ್ ಎನ್ನುವವರು ಬೆದರಿಕೆ ಹಾಕಿರುವ ಬಗ್ಗೆ ಹಾಗೂ ಲೊಕೇಷನ್ ಕೇಳ್ತಿರುವ ಬಗ್ಗೆ ಕರೆ ಮಾಡಿ ತಿಳಿಸಿದ್ದಾನೆ, ಶ್ರೀನಾಥ್ ಎನ್ನುವವರು ಮಾತನಾಡಿರುವ ಆಡಿಯೊ ಕಳುಹಿಸಿದ್ದಾನೆ.
ತೆಲಂಗಾಣದ 2ನೇ ಮುಖ್ಯಮಂತ್ರಿ ಆಗಿ ರೇವಂತ್ ರೆಡ್ಡಿ ಪ್ರಮಾಣ ವಚನ ಸ್ವೀಕಾರ
ಬೆಳಿಗ್ಗೆ ನೋಡಿದ್ರೆ… ಗಜೇಂದ್ರ ಬೀದಿ ಹೆಣವಾಗಿದ್ದಾನೆ, ಗಜೇಂದ್ರ ಕೊಲೆಯಲ್ಲಿ ಶ್ರೀನಾಥ್ ಹಾಗೂ ಇನ್ನೂ ಕೆಲವರ ಕೈವಾಡದ ಬಗ್ಗೆ ಗಜೇಂದ್ರ ಅಕ್ಕ ಅನುಮಾನ ವ್ಯಕ್ತಪಡಿಸಿದ್ದಾರೆ. ಇನ್ನೂ ಕೊಲೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಬಾಗೇಪಲ್ಲಿ ಠಾಣೆ ಪೊಲೀಸರು, ಇಬ್ಬರು ಶಂಕಿತ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಮತ್ತೊಂದೆಡೆ ಮೃತ ಗಜೇಂದ್ರ ಮಹಿಳೆಯೊರ್ವಳ ಜೊತೆ ಅನೈತಿಕ ಸಂಬಂಧ ಹೊಂದಿದ್ದು ಅದೆ ವಿಚಾರಕ್ಕೆ ಕೊಲೆಯಾಗಿರಬಹುದು ಎನ್ನಲಾಗಿದೆ .