ತಮಿಳಿನ ಖ್ಯಾತ ನಟ ಇವಿ ಗಣೇಶ್ ಬಾಬು ನಟಿಸಿ, ನಿರ್ದೇಶಿಸಿ, ನಿರ್ಮಿಸಿರುವ “ಮಂಚ” ಚಿತ್ರದ ಟ್ರೇಲರ್ ಇಂದು ಬಿಡುಗಡೆ ಆಗಿದೆ.. ಟ್ರೇಲರ್ ಕುತೂಹಲ ಮೂಡಿಸಿದ್ದು, ಚಿತ್ರ ನೋಡುವ ಕಾತುರವನ್ನು ಹೆಚ್ಚಿಸಿದೆ. ತಮ್ಮ ಸಂಗೀತದಿಂದ ನಮ್ಮ ಕನ್ನಡಿಗರ ಮನ ತಣಿಸಿದ “ಅಮೃತವರ್ಷಿಣಿ” ಖ್ಯಾತಿಯ ಸಂಗೀತ ನಿರ್ದೇಶಕ ದೇವಾ ರವರ ಮಗ ಶ್ರೀಕಾಂತ್ ದೇವಾ ರವರು ಹೃದಯಸ್ಪರ್ಶಿ ಸಂಗೀತ ನೀಡಿರುವ ಈ “ಮಂಚ” ಚಿತ್ರ ಕೇವಲ ವ್ಯಕ್ತಿಗಳ ಜೊತೆಗೆ ಮಾತ್ರವಲ್ಲದೆ ನಿರ್ಜೀವ ವಸ್ತುಗಳ ಜೊತೆಗೂ ಕೂಡ ನಮಗಿರುವ ಭಾವನಾತ್ಮಕ ಸಂಬಂಧಗಳ ವೈಶಿಷ್ಟ್ಯತೆಯನ್ನು ಎತ್ತಿ ಹಿಡಿಯುವ ಈ ವಿಶೇಷವಾದ ಚಿತ್ರ ಎಲ್ಲರ ಮನಸ್ಸನ್ನು ಗೆಲ್ಲಲಿದೆ.
Mumbai 26/11 Attacks: ಪಾಕ್ ಜೈಲಿನಲ್ಲೇ ವಿಷ ಪ್ರಾಶನಕ್ಕೆ ತುತ್ತಾಗಿರುವ ಮೋಸ್ಟ್ ವಾಂಟೆಡ್ ಉಗ್ರ..!
ತಮಿಳಿನ ಕನ್ನಡ ಅವತರಣಿಕೆಯ ಈ ಚಿತ್ರಕ್ಕೆ RRR ಹಾಗೂ ಪುಷ್ಪ ಖ್ಯಾತಿಯ ವರದರಾಜ್ ಚಿಕ್ಕಬಳ್ಳಾಪುರ ಸಾಹಿತ್ಯ ಹಾಗೂ ಸಂಭಾಷಣೆ ಬರೆದು ಡಬ್ಬಿಂಗ್ ಮಾಡಿದ್ದಾರೆ.“ಮಂಚ” ಎಂದರೆ ಅದು ಕೇವಲ ಮಲಗಲು ಬಳಸುವ ಸಾಧನವಲ್ಲ.. ಅದು ಹಲವು ಜನನ ಮರಣಗಳಿಗೆ ಸಾಕ್ಷಿಯಾಗುವ ಒಂದು ಅಚಲಿತ ಜೀವವಾಗಿರುತ್ತದೆ. ಕೇವಲ ಕಣ್ಣುಗಳಿಂದ ನೋಡಿದರೆ ಅದೊಂದು ನಿರ್ಜೀವ ವಸ್ತುವಾಗಿ ಕಾಣುತ್ತದೆ. ಅದೇ ಮನಸ್ಸಿನಿಂದ ನೋಡಿದರೆ ಅದು ನಮ್ಮ ಕುಟುಂಬದ ಒಂದು ಅವಿಭಾಜ್ಯ ಸದಸ್ಯನಂತೆ ಕಂಡುಬರುತ್ತದೆ. ಈ ಮಂಚದ ಸುತ್ತಲೂ ನಡೆಯುವ ಸಂಘಟನೆಗಳೇ ಈ ಚಿತ್ರದ ಕಥಾಹಂದರವಾಗಿರುತ್ತದೆ..