ಬೆಳಗಾವಿ:– ಕರ್ನಾಟಕ ವಿಧಾನ ಪರಿಷತ್ ಸದಸ್ಯ ಟಿಎ ಶರವಣ ಅವರು, ಬೆಳಗಾವಿಯ ಸುವರ್ಣ ವಿಧಾನ ಸೌಧದ ಹೊರ ಆವರಣದಲ್ಲಿ ಗಿಡ ನೆಟ್ಟು, ನೀರು ಸಿಂಪಡಿಸಿದರು.
ಈ ಮೂಲಕ ಪರಿಸರದ ಮೇಲಿರುವ ತಮ್ಮ ಕಾಳಜಿ ತೋರಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಟಿಎ ಶರವಣ ಅವರು,
ಮರಗಳ ಬೇರುಗಳು ನಮ್ಮ ಜೀವನಾಧಾರ. ನೆಟ್ಟ ಪ್ರತಿ ಸಸಿಯು ಶಾಸಕರ ಹೆಸರಿರುವ ಫಲಕವನ್ನು ಹೊಂದಿದೆ, ಹಲವು ವರ್ಷಗಳ ನಂತರ ಬಂದರು ಈ ಸಂದರ್ಭವನ್ನು ಮೆಲಕು ಹಾಕಿಕೊಳ್ಳಬಹುದು. ಪರಿಸರದ ಸಂರಕ್ಷಣೆ ನಮ್ಮೆಲ್ಲರ ಹೊಣೆ,ಈ ರೀತಿಯ ಪರಿಸರ ಕಾಳಜಿಯನ್ನು ನಾನು ಮನಸಾರೆ ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರು, ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.