ಕಲಬುರ್ಗಿ:- ಹಾಡುಹಗಲೇ ವ್ಯಕ್ತಿಯೊಬ್ಬನ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆಗೈದ ಘಟನೆ ಕಲಬುರಗಿಯಲ್ಲಿ ನಡೆದಿದೆ.
ವಕೀಲ ವೃತ್ತಿ ಮಾಡುತ್ತಿದ್ದ ಈರಣ್ಣ ಗೌಡ ಕೊಲೆಗೀಡಾದ ದುರ್ದೈವಿ. ಸಾಯಿನಗರದ ಮನೆ ಬಳಿ ಘಟನೆ ನಡೆದಿದ್ದು ಆಸ್ತಿ ವಿವಾದಕ್ಕೆ ಕೊಲೆ ಆಗಿರಬಹುದು ಅಂತ ಶಂಕಿಸಲಾಗಿದೆ.
ವಿವಿ ಠಾಣೆ ಪೋಲೀಸರು ಪರಿಶೀಲನೆ ನಡೆಸಿದ್ದು ತನಿಖೆ ಕೈಗೆತ್ತಿಕೊಂಡಿದ್ದಾರೆ..