ನೆಲಮಂಗಲ:– ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ಬಳಿ ತಡರಾತ್ರಿ ಎಟಿಎಂ ಕಳ್ಳತನಕ್ಕೆ ವಿಫಲಯ ಯತ್ನ ನಡೆಸಿದ ಘಟನೆ ಜರುಗಿದೆ.
ಇಬ್ಬರು ಕಳ್ಳರು ರಾತ್ರಿ 1:50ರ ಸುಮಾರಿಗೆ ನೆಲಮಂಗಲ ಟೌನ್ ಬಳಿ ಇರುವ ಎಟಿಎಂಗೆ ನುಗ್ಗಿ ಕಟರ್ ಮೂಲಕ ಎಟಿಎಂ ಯಂತ್ರ ಕಟ್ ಮಾಡಲು ಯತ್ನಿಸಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಮುಂಬೈ ಆಕ್ಸಿಸ್ ಬ್ಯಾಂಕ್ ಅಧಿಕಾರಿಗಳು ಕಟ್ಟಡ ಮಾಲಿಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಕಟ್ಟಡದ ಮಾಲೀಕರು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಮಾಲಿಕರು ಸ್ಥಳಕ್ಕೆ ಬರುತ್ತಿಂದ ಕಳ್ಳರು ಕೃತ್ಯಕ್ಕೆ ಬಳಸುತ್ತಿದ್ದ ವಸ್ತುಗಳನ್ನೆಲ್ಲ ಸ್ಥಳದಲ್ಲೇ ಬಿಟ್ಟು ಕಳ್ಳರು ಪರಾರಿಯಾಗಿದ್ದಾರೆ. ಆದರೆ, ಗ್ಯಾಸ್ ಕಟರ್ ಬಳಸಿ ಯಂತ್ರವನ್ನು ಕಟ್ ಮಾಡುವ ವೇಳೆ ಬೆಂಕಿ ತಗುಲಿ ಸಾವಿರಾರು ರೂಪಾಯಿ ಸುಟ್ಟು ಹೋಗಿವೆ. ಘಟನಾ ಸ್ಥಳಕ್ಕೆ ಬ್ಯಾಂಕ್ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದು, ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.