ಕಲಬುರಗಿ:- ACC ಸಿಮೆಂಟ್ ಕಂಪೆನಿಯ ಪ್ಯಾಕಿಂಗ್ ವಿಭಾಗದ ಇಂಜಿನಿಯರ್ ಆತ್ಮಹತ್ಯೆಗೆ ಶರಣಾಗಿರೋ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಚಿತ್ತಾಪುರ ತಾಲೂಕಿನ ವಾಡಿಯಲ್ಲಿರುವ ACC ಸಿಮೆಂಟ್ ಕಂಪೆನಿಯ ಇಂಜಿನಿಯರ್ ರಮೇಶ್ ಪವಾರ್ ಆತ್ಮಹತ್ಯೆಗೆ ಶರಣಾಗಿರೋ ದುರ್ದೈವಿ. ಚಿತ್ತಾಪುರ ಮಾಜಿ ಶಾಸಕ ವಾಲ್ಮೀಕಿ ನಾಯಕ್ ಅಳಿಯ ಆಗಿರೋ ರಮೇಶ್ ಕಳೆದ 26 ವರ್ಷಗಳಿಂದ ಕೆಲಸ ಮಾಡುತ್ತಿದ್ರು.
ಆದ್ರೆ ಇತ್ತೀಚಿಗೆ ನಿಮ್ಮ ಫರ್ಮಾಮೆನ್ಸ್ ಸರಿಯಿಲ್ಲ ಕೆಲಸದಿಂದ ಟರ್ಮಿನೇಟ್ ಮಾಡ್ತಿದ್ದೇವೆ ಅಂತ ಹೇಳಿ ನನ್ನನ್ನ ವಿನಾಕಾರಣ ಟಾರ್ಗೆಟ್ ಮಾಡಿದ್ರು. ಹೀಗಂತ ಖುದ್ದು ರಮೇಶ್ ಪವಾರ್ ಸಾವಿಗೂ ಮುನ್ನ ಸೆಲ್ಫಿ ವಿಡಿಯೋ ರೆಕಾರ್ಡ್ ಮಾಡಿ ನೇಣಿಗೆ ಕೊರಳೊಡ್ಡಿದ್ದಾರೆ..ಈ ಬಗ್ಗೆ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.