ಸಾಮಾನ್ಯವಾಗಿ ಗೆಣಸು ಎಲ್ಲ ಋತುಗಳಲ್ಲಿಯೂ ದೊರೆಯುತ್ತದೆ. ಆದರೆ ಸಿಹಿ ಗೆಣಸು ಹೆಚ್ಚಾಗಿ ಸಿಗುವುದು ಚಳಿಗಾಲದಲ್ಲಿ ಮಾತ್ರ. ಮಣ್ಣಿನಲ್ಲಿ ಅಡಿಯಲ್ಲಿ ಬೆಳೆಯುವ ಸಿಹಿ ಗೆಣಸು ಆರೋಗ್ಯಕ್ಕೆ ಒಳ್ಳೆಯದು. ಇದು ತುಂಬಾ ಟೇಸ್ಟಿ ಮತ್ತು ಪೌಷ್ಟಿಕಾಂಶವನ್ನು ತುಂಬಿಕೊಂಡಿದೆ. ಸಿಹಿ ಗೆಣಸು ಚಳಿಗಾಲದಲ್ಲಿ ತಿನ್ನಲು ಒಳ್ಳೆಯದು. ಇದರ ಸೇವನೆಯಿಂದ ಆಗುವ ಆರೋಗ್ಯ ಪ್ರಯೋಜನಗಳನ್ನು ನಾವೀಗ ನೋಡೋಣ.
ಚರ್ಮದ ಆರೋಗ್ಯಕ್ಕೆ ಒಳ್ಳೆಯದು
ಚಳಿಗಾಲದಲ್ಲಿ ನಮ್ಮ ತ್ವಚೆಯನ್ನು ಸುರಕ್ಷಿತವಾಗಿಡುವುದು ಬಹಳ ಮುಖ್ಯ. ಏಕೆಂದರೆ ಚಳಿಗಾಲದಲ್ಲಿ ಚರ್ಮ ಬೇಗ ಒಣಗುತ್ತದೆ. ಈ ರೀತಿ ಆದಾಗ ನಮ್ಮ ಚರ್ಮಕ್ಕೆ ಹಾನಿಯಾಗುತ್ತದೆ. ಹೀಗಾಗಿ ಸಿಹಿ ಗೆಣಸು ತಿನ್ನುವುದು ಚರ್ಮದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನೀವು ಸುಕ್ಕುಗಟ್ಟಿದ, ವಯಸ್ಸಾದ ಚರ್ಮದ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಸ್ವತಂತ್ರ ರಾಡಿಕಲ್ ವಿರುದ್ಧ ಹೋರಾಡುವ ಮತ್ತು ಚರ್ಮವನ್ನು ರಕ್ಷಿಸುವ ಸಿಹಿ ಗೆಣಸು ತಿನ್ನಬೇಕು. ಇದು ಚರ್ಮವನ್ನು ಮೃದುಗೊಳಿಸುತ್ತದೆ.
ಮೆಗ್ನೀಸಿಯಮ್ ಹೇರಳ
ಈ ಚಳಿಗಾಲವು ದೇಹದಲ್ಲಿ ಮಾತ್ರವಲ್ಲದೆ ಮನಸ್ಸಿನಲ್ಲಿಯೂ ಅನೇಕ ಬದಲಾವಣೆಗಳನ್ನು ತರುತ್ತದೆ. ತಣ್ಣನೆಯ ಗಾಳಿ ಬೀಸಿದಾಗ ಮನೆಯಿಂದ ಹೊರಗೆ ಬರದ ಮನಸ್ಥಿತಿ ಎಲ್ಲರದ್ದಾಗಿರುತ್ತದೆ. ಅಂತಹ ಸಂದರ್ಭದಲ್ಲಿ, ನಿಮ್ಮ ಮನಸ್ಥಿತಿಯನ್ನು ಸುಧಾರಿಸಲು, ಮೆಗ್ನೀಸಿಯಮ್ ಅಂಶದಿಂದ ಸಮೃದ್ಧವಾಗಿರುವ ಸಿಹಿ ಗೆಣಸನ್ನು ಸೇವಿಸುವುದು ಉತ್ತಮ, ಇದು ಒತ್ತಡದ ವಿರುದ್ಧ ಹೋರಾಡುತ್ತದೆ.
ಬೆಚ್ಚಗಿರಿಸುತ್ತದೆ
ಸಿಹಿ ಗೆಣಸು, ಬೆಚ್ಚಗಿನ ಗುಣಗಳನ್ನು ಹೊಂದಿದೆ. ಇದು ಸಾಮಾನ್ಯವಾಗಿ ಶಾಖ ಉತ್ಪಾದಿಸುವ ಗುಣಗಳನ್ನು ಹೊಂದಿದ್ದು, ಸಿಹಿಗೆಣಸು ಸೇವಿಸುವುದರಿಂದ ದೇಹ ಚಳಿಗಾಲದಲ್ಲೂ ಸದಾ ಬೆಚ್ಚಗಿರುತ್ತದೆ. ನೈಸರ್ಗಿಕ ಸಕ್ಕರೆ ಅಂಶವಿರುವ ಸಿಹಿ ಗೆಣಸು ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ.
ರಕ್ತದೊತ್ತಡ ಸುಧಾರಣೆ
ಸಿಹಿ ಗೆಣಸಿನಲ್ಲಿ ಫೈಬರ್ ಸಮೃದ್ಧವಾಗಿದೆ. ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಇದು ಉಪಯುಕ್ತವಾಗಿದೆ. ಇದು ರಕ್ತದೊತ್ತಡದ ಮಟ್ಟವನ್ನು ಸುಧಾರಿಸುತ್ತದೆ. ಪೊಟ್ಯಾಸಿಯಮ್ ಕೂಡ ಹೆಚ್ಚಾಗಿ ಇರುವುದರಿಂದ ಹೃದಯದ ಆರೋಗ್ಯಕ್ಕೆ ಬಹಳ ಮುಖ್ಯವಾಗಿದೆ.