ನನಗೆ ಎಲ್ಲಿಯವರೆಗೆ ನಡೆದಾಡಲು ಸಾಧ್ಯವೋ ಅಲ್ಲಿಯವರೆಗೆ ಐಪಿಎಲ್ನಲ್ಲಿ ಆಡುವೆ ಎಂದು ಆಸ್ಟ್ರೆಲಿಯಾದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಹೇಳಿದ್ದಾರೆ.
ವೃತ್ತೀಜಿವನದ ಯಶಸ್ಸಿನಲ್ಲಿ ಐಪಿಎಲ್ ಮಹತ್ವದ ಪಾತ್ರ ವಹಿಸಿದೆ. ಹೀಗಾಗಿ ನನಗೆ ಎಲ್ಲಿಯವರೆಗೆ ನಡೆದಾಡಲು ಸಾಧ್ಯವೋ ಅಲ್ಲಿಯವರೆಗೆ ಐಪಿಎಲ್ನಲ್ಲಿ ಆಡುವೆ ಎಂದರು.
ಬಹುಶಃ ಐಪಿಎಲ್ ನಾನು ಜೀವನದಲ್ಲಿ ಆಡುವ ಕೊನೇ ಟೂರ್ನಿಯಾಗಿರುತ್ತದೆ. ನನಗೆ ಐಪಿಎಲ್ನಿಂದ ಭಾರಿ ಲಾಭವಾಗಿದೆ. ಎಬಿ ಡಿವಿಲಿಯರ್ಸ್, ವಿರಾಟ್ ಕೊಹ್ಲಿ ಅವರಂಥ ಆಟಗಾರರ ಜತೆಗೆ 2 ತಿಂಗಳ ಕಾಲ ಆಡುವ ಅವಕಾಶ ಕಲ್ಪಿಸಿದೆ. ಅವರೊಂದಿಗೆ ಮಾತನಾಡುತ್ತ, ಆಡುತ್ತ ಸಾಕಷ್ಟು ಕಲಿತಿರುವೆ’ ಎಂದು ಆರ್ಸಿಬಿ ಆಟಗಾರ ತಿಳಿಸಿದ್ದಾರೆ.