ಬೆಂಗಳೂರು:- ಗೋಳಿಹಟ್ಟಿ ಶೇಖರ್ ಅವರ ಆಡಿಯೋ ಬಿಡುಗಡೆ ವಿಚಾರವಾಗಿ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ ಅವರು RSS ನಲ್ಲಿ ಅಂತಹ ವ್ಯವಸ್ಥೆ ಇಲ್ಲವೇ ಇಲ್ಲ ಎಂದಿದ್ದಾರೆ.
ಆರ್ಎಸ್ಎಸ್ನಲ್ಲಿ ಈ ರೀತಿ ವ್ಯವಸ್ಥೆ ಇಲ್ಲ. ಸಂಘದಲ್ಲಿ ಈ ರೀತಿ ಎಲ್ಲಿಯೂ ಕೇಳಿಲ್ಲ. ರಾಜಕೀಯ ಕಾರಣಕ್ಕಾಗಿ ಕಳೆದ ಚುನಾವಣೆಯಲ್ಲಿ ಟಿಕೆಟ್ ಸಿಗದೆ ಇದ್ದಲಿ ಈ ರೀತಿ ಹೇಳಿದ್ದೀರಾ..? ಬಿಜೆಪಿ ವಿರುದ್ದ ಸುಳ್ಳು ಆಪಾದನೆ ಮಾಡುವುದು ತಪ್ಪು. ಉಂಡ ತಟ್ಟೆಯಲ್ಲಿ ಮಣ್ಣು ಹಾಕುವುದು ಎಷ್ಟರಮಟ್ಟಿಗೆ ಸರಿ..? ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಈ ರೀತಿ ಎಲ್ಲಿಯೂ ಇಲ್ಲ. 10 ತಿಂಗಳ ಬಳಿಕ ಈ ಪ್ರಶ್ನೆ ಬಂದಿದೆ ಗೋಳಿಹಟ್ಟಿ ಶೇಖರ್ ಹೇಳಿಕೆಗೆ ಖಂಡಿಸುತ್ತೇನೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.