ಬೆಳಗಾವಿ:– ಇಬ್ಬರು ಮಹಾನುಭಾವರು ಸೇರಿಕೊಂಡು ಕರ್ನಾಟಕದಲ್ಲಿ ಪಕ್ಷವನ್ನು ಹಾಳುಗೆಡವಿದರು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಕೇಂದ್ರ ಮತ್ತು ರಾಜ್ಯ ಮಟ್ಟದ ಇಬ್ಬರು ಸಿಂಗ್ಗಳು, ಮಹಾನುಭಾವರು ಸೇರಿಕೊಂಡು ಕರ್ನಾಟಕದಲ್ಲಿ ಪಕ್ಷವನ್ನು ಹಾಳುಗೆಡವಿದರು ಎಂದರು.
ನನ್ನ ಬಾಯಿ ಮುಚ್ಚಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದರು.
‘ಪಕ್ಷ ಹಾಳು ಮಾಡಿದವರು ಯಾರು ಎಂಬ ಬಗ್ಗೆ ಎಲ್ಲ ಮಾಹಿತಿಯನ್ನೂ ವರಿಷ್ಠರ ಗಮನಕ್ಕೆ ತಂದಿದ್ದೇನೆ. ದೆಹಲಿಗೆ ಬರಲು ಕರೆ ಮಾಡುವುದಾಗಿ ಅವರು ಹೇಳಿದ್ದಾರೆ. ಕರೆ ಬಂದ ಕೂಡಲೇ ಹೋಗಿ ಎಲ್ಲವನ್ನೂ ವಿವರಿಸುತ್ತೇನೆ. ರಮೇಶ ಜಾರಕಿಹೊಳಿ ಅವರಿಗೆ ಕರೆ ಬರಬಹುದು. ಬಂದರೆ ಒಟ್ಟಿಗೆ ಹೋಗುತ್ತೇವೆ’ ಎಂದರು.
ಅರವಿಂದ ಬೆಲ್ಲದ ಅವರನ್ನು ವಿರೋಧ ಪಕ್ಷದ ಉಪ ನಾಯಕರಾಗಿ ಮಾಡುತ್ತಾರಂತಲ್ಲ’ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಲ್ಲ ತೀರ್ಮಾನಗಳನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು, ಪ್ರತಿಪಕ್ಷ ನಾಯಕರೇ ತೆಗೆದುಕೊಳ್ಳುತ್ತಾರೆ. ಹಾಗಿರುವಾಗ ಉಪ ನಾಯಕನಿಗೆ ಏನು ಕೆಲಸ? ಉಪ ಸಭಾಧ್ಯಕ್ಷರ ಸ್ಥಾನವಿದ್ದಂತೆ. ಸಭಾಧ್ಯಕ್ಷರು ತಮ್ಮ ಜಾಗದಲ್ಲಿ ಕೂರಲು ಅವರಿಗೆ ಅವಕಾಶವನ್ನೇ ಕೊಡುವುದಿಲ್ಲ. ಮಂಗಳವಾರ ಕೇವಲ ಅರ್ಧ ಗಂಟೆ ಕೊಟ್ಟರು. ಉಪ ನಾಯಕನಿಗೂ ಸಮಾಜದಲ್ಲಿ ಗೌರವ ಏನೂ ಸಿಗುವುದಿಲ್ಲ ಎಂದು ಹೇಳಿದ್ದಾರೆ.