ಸತತ 3ನೇ ಪಂದ್ಯದಲ್ಲೂ ‘ಸೂಪರ್ 10’ ಮೂಲಕ ಅಬ್ಬರಿಸಿದ ಯುವ ರೈಡರ್ ಸೋನು 10ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್ನಲ್ಲಿ ಗುಜರಾತ್ ಜೈಂಟ್ಸ್ಗೆ ಹ್ಯಾಟ್ರಿಕ್ ಗೆಲುವು ತಂದುಕೊಟ್ಟಿದ್ದಾರೆ. ಮಂಗಳವಾರ ಯು ಮುಂಬಾ ವಿರುದ್ಧ ಜೈಂಟ್ಸ್ಗೆ 39-37 ಅಂಕಗಳಿಂದ ಜಯ ಲಭಿಸಿತು. ಆರಂಭದಲ್ಲಿ ಜೈಂಟ್ಸ್ ಮಿಂಚಿನ ಆಟವಾಡಿದರೂ, ಮೊದಲಾರ್ಧದ ವೇಳೆಗೆ ಮುಂಬಾ 18-16 ಅಂಕಗಳಿಂದ ಮುನ್ನಡೆ ಸಾಧಿಸಿತ್ತು. ಬಳಿಕ ಪುಟಿದೆದ್ದ ಜೈಂಟ್ಸ್ ಅಂಕಗಳ ಅಂತರ ಹೆಚ್ಚಿಸುತ್ತಾ ಸಾಗಿದರೂ, ಒಂದು ಹಂತದಲ್ಲಿ ಇತ್ತಂಡಗಳು 36-36ರಲ್ಲಿ ಸಮಬಲ ಸಾಧಿಸಿದ್ದವು.
ಈ ವೇಳೆ ಸೋನು ಒಂದೇ ರೈಡ್ನಲ್ಲಿ 3 ಅಂಕ ಪಡೆದು ಜೈಂಟ್ಸ್ ರೋಚಕ ಗೆಲುವಿಗೆ ಕಾರಣರಾದರು. ಸೋನು 16 ರೈಡ್ನಲ್ಲಿ 11 ಅಂಕ ಪಡೆದರೆ, ಅವರಿಗೆ ಉತ್ತಮ ಬೆಂಬಲ ನೀಡಿದ ರಾಕೇಶ್ ಹಾಗೂ ರೋಹಿತ್ ಗುಲಿಯಾ ತಲಾ 7 ರೈಡ್ ಅಂಕ ಸಂಪಾದಿಸಿದರು. ಗುಮಾನ್ ಸಿಂಗ್ ಹಾಗೂ ಅಮೀರ್ಮೊಹಮದ್ ಝಫರ್ದಾನೆಶ್ ತಲಾ 10 ಅಂಕಗಳನ್ನು ಪಡೆದರೂ ಮುಂಬೈನ ಸತತ 2ನೇ ಜಯದ ಕನಸು ಕೈಗೂಡಲಿಲ್ಲ.