ಹುಬ್ಬಳ್ಳಿ: ಚಲಿಸುತ್ತಿದ್ದ BRTS ಚಿಗರಿ ಬಸ್ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಂಡು ಬಂದಿದ್ದು, ಕೂಡಲೆ ನೋಡಿದ ಚಾಲಕನ ಸಮಯಪ್ರಜ್ಞೆಯಿಂದ ಚಿಗರಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 30ಕ್ಕೂ ಹೆಚ್ಚು ಪ್ರಯಾಣಿಕರ ಜೀವ ಉಳದಿದೆ.
ಹೌದು,,, ಹುಬ್ಬಳ್ಳಿಯ ಎ.ಪಿ.ಎಂ.ಸಿ. ನಿಲುಗಡೆ ಬಿಆರ್ಟಿಎಸ್ ಬಸ್ಸಿನಲ್ಲಿ ಬೆಂಕಿ ಕಂಡು ಬಂದಿರುವ ಘಟನೆ ನಡೆದಿದೆ. ಬಸ್ ನಂ. KA-25 / F-3472. ಧಾರವಾಡದಿಂದ ಹುಬ್ಬಳ್ಳಿ ಕಡೆ ಬರುತ್ತಿದ್ದ ಬಸ್ ಇದಾಗಿದ್ದು, ಬಸ್ ಚಾಲಕ ಕೂಡಲೆ ಪ್ರಯಾಣಿಕರನ್ನು ಇಳಿಸಿ, ಬಸ್ ಬದಿಗೆ ಹಚ್ಚಿ ಬೆಂಕಿ ನಂಧಿಸಲು ಯತ್ನಿಸಿದ್ದಾರೆ.