ಬೆಳಗಾವಿ: ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಮೈಸೂರು ದಸರಾ ಖ್ಯಾತಿಯ ಅರ್ಜುನ ಆನೆ ಬಲಿಯಾಗಿರುವುದಕ್ಕೆ ಅರಣ್ಯ ಇಲಾಖೆ ವಿರುದ್ಧ ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಗರಂ ಆಗಿದ್ದಾರೆ. ಪರಿಷತ್ ಕಲಾಪದ ವೇಳೆ ಮಾತನಾಡಿದ ಅವರು, 60 ವರ್ಷ ಮೀರಿದ ಅನೆಯನ್ನ ಕಾರ್ಯಾಚರಣೆಗೆ ಬಳಕೆ ಮಾಡಬಾರದು ಅಂತ ನಿಯಮ ಇತ್ತು. ಈಗ ಅರ್ಜುನ ಆನೆಗೆ 64 ವರ್ಷ. ಕಾಡಾನೆ ಸೆರೆ ಹಿಡಿಯಲು ಯಾಕೆ ಉಪಯೋಗ ಮಾಡಿದ್ರು ಎಂದು ಪ್ರಶ್ನಿಸಿದ್ದಾರೆ. ಇದೊಂದು ಆತಂಕದ ವಿಚಾರ. ಸರ್ಕಾರ ಅರ್ಜುನ ಸಾವಿನ ಬಗ್ಗೆ ತನಿಖೆ ಮಾಡಬೇಕು. ಅರವಳಿಕೆ ಪುಂಡಾನೆಗೆ ಬದಲು ಅರ್ಜುನಿಗೆ ಬಿತ್ತು ಅಂತ ಆರೋಪ ಇದೆ. ಇದರ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.
ರಾಕಿಭಾಯ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ಡಿಸೆಂಬರ್ 8ಕ್ಕೆ ಮುಂದಿನ ಚಿತ್ರದ ಟೈಟಲ್ ಘೋಷಣೆ!
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಬಳಿ ಕಾಡಾನೆ ಸೆರೆಗೆ ಸೋಮವಾರ ನಡೆದ ಕಾರ್ಯಾಚರಣೆಯಲ್ಲಿ ಕಾಡಾನೆ ದಾಳಿಯಿಂದ ಅರ್ಜುನ ಆನೆ ಮೃತಪಟ್ಟಿತು. ನಾಲ್ಕು ಸಾಕಾನೆಗಳೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ವೈದ್ಯರು ಕಾರ್ಯಾಚರಣೆ ಆರಂಭಿಸಿದ್ದರು. ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡುವ ಕಾರ್ಯಾಚರಣೆ ವೇಳೆ ಅರ್ಜುನನ ಮೇಲೆ ಒಂಟಿಸಲಗ ಅಟ್ಯಾಕ್ ಮಾಡಿತ್ತು. ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಅರ್ಜುನ ಸ್ಥಳದಲ್ಲೇ ಪ್ರಾಣ ಬಿಟ್ಟಿದೆ.