ಬಳ್ಳಾರಿ: ಕಂಪ್ಲಿಯಲ್ಲಿ ಮುಂದುವರೆದ ಲೊಕಾಯುಕ್ತ ದಾಳಿ ಮುಂದುವರೆಸಿದ್ದಾರೆ. ಗಂಗಾವತಿ ಅರಣ್ಯಾಧಿಕಾರಿ ಮಾರುತಿ ಮನೆ ಮೇಲೆ ಲೋಕಾ ದಾಳಿ ನಡೆಸಿದ್ದು, ಕಂಪ್ಲಿಯ ಮಾರುತಿ ನಿವಾಸದಲ್ಲಿ ಶೋಧ ಕಾರ್ಯ ಮುಂದುವರಿದಿದೆ.
ಸತತ ಮೂರು ಗಂಟೆಯಿಂದ 6 ಜನ ಲೋಕಾಯುಕ್ತ ಅಧಿಕಾರಿಗಳಿಂದ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಭ್ರಷ್ಟಾಚಾರ ಹಾಗೂ ಅಪಾರ ಆಸ್ತಿ ಗಳಿಕೆ ದೂರು ಹಿನ್ನೆಲೆ ಲೋಕಾ ಅಧಿಕಾರಿಗಳು ಮಾರುತಿ ಆದಾಯದ ಬಗ್ಗೆ ಸಂಬಂಧಿಕರಿಂದಲೂ ಮಾಹಿತಿ ಕಲೆಹಾಕ್ತಿದ್ದಾರೆ.