ಹಾವೇರಿ: ರಾಣೇಬೆನ್ನೂರಿನ ಈಶ್ವರ ನಗರದ ಹೆಸ್ಕಾಂ ನಿವೃತ್ತ ಕಿರಿಯ ಇಂಜಿನಿಯರ್ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದಾರೆ. ಇಂದು ನಶುಕಿನ 6ಗಂಟೆಯಿಂದ ಲೋಕಾ ಅಧಿಕಾರಿಗಳ ಪರಿಶೀಲನೆ ನಡೆಸುತ್ತಿದ್ದು, ಧಾರವಾಡ ಹೆಸ್ಕಾಂನಲ್ಲಿ ಕಿರಿಯ ಇಂಜಿನಿಯರಾಗಿ ಕಾರ್ಯನಿರ್ವಹಿಸುತ್ತಿದ್ದ ಬಸವರಾಜ ಮಳೇಮಠ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ.
ದಾಳಿಯಲ್ಲಿರುವ ಧಾರವಾಡ ಲೋಕಾಯುಕ್ತ ಎಸ್ ಪಿ ಸತೀಶ ಚೀಟಗುಬ್ಬಿ, ಡಿವೈಎಸ್ ಪಿ ವೆಂಕನಗೌಡ ಪಾಟೀಲ, ಸಿಪಿಐ ಸಂತೋಷ ಸೇರಿದಂತೆ ಒಟ್ಟು 12ಜನರ ಅಧಿಕಾರಿಗಳ ತಂಡದಿಂದ ಕಳೆದ ನಾಲ್ಕು ತಿಂಗಳ ಹಿಂದೆ ಸೇವೆಯಿಂದ ನಿವೃತ್ತಿ ಹೊಂದಿದ್ದ ಬಸವರಾಜ್ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದಾರೆ.