ಕಲಬುರಗಿ:- ಮಾಜಿ ಸಿಎಂ ಬಿಎಸ್ವೈ ಬೀಗರ ಮನೆ ಮೇಲೆ ಲೋಕಾಯುಕ್ತ ದಾಳಿಯಾಗಿದೆ.
ಕಲಬುರಗಿಯ ಕರುಣೇಶ್ವರ ನಗರದಲ್ಲಿರುವ ಡಾ ಪ್ರಭುಲಿಂಗ ಮಾನ್ಕರ್ ನಿವಾಸದ ಮೇಲೆ ಲೋಕಾ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪತ್ನಿಯ ಸಹೋದರರಾಗಿರುವ ಡಾ.ಪ್ರಭುಲಿಂಗ ಮಾನ್ಕರ್ ಪ್ರಸ್ತುತ ಯಾದಗಿರಿ DHO ಆಗಿದ್ದಾರೆ. ಕಲಬುರಗಿ ಯಾದಗಿರಿ ಅಲ್ಲದೇ ಗಬ್ಬೂರಿನಲ್ಲಿರುವ ಫಾರ್ಮ್ ಹೌಸ್ ಮೇಲೂ ದಾಳಿಯಾಗಿದ್ದು ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ.
ದಾಖಲೆಗಳನ್ನ ಕಲೆ ಹಾಕುತ್ತಿರುವ ತಂಡ ಆಸ್ತಿಪಾಸ್ತಿ ಸೇರಿ ಎಲ್ಲದರ ಲೆಕ್ಕಾಚಾರ ನಡೆಸಿದ್ದು ಸಂಜೆ ವೇಳೆಗೆ ಸಂಪೂರ್ಣ ಮಾಹಿತಿ ಸಿಗಲಿದೆ ಅಂತ ಹೇಳಲಾಗ್ತಿದೆ.