ಬಳ್ಳಾರಿ: ಸ್ಥಳೀಯ ಶಾಸಕರೇ, ಶಿಕ್ಷಣ ಸಚಿವರೇ ನೀವು ಈ ಸ್ಟೋರಿ ನೋಡಲೇಬೇಕು.
ಹೌದು, ಬಾಲಕಿಯ ವಸತಿ ಶಾಲೆಯ ಸ್ಥಿತಿಯ ಅದೋಗತಿಗೆ ತಲುಪಿದ್ದು, ಹಳೆಯ ಚಲನಚಿತ್ರದ ಕಟ್ಟಡದಲ್ಲಿ ಮಕ್ಕಳು ವಿಧ್ಯಾಭ್ಯಾಸ ಮಾಡುತ್ತಿದ್ದಾರೆ. ಸುಮಾರು 13 ವರ್ಷಗಳಿಂದ ಸ್ವಂತ ಕಟ್ಟಡ ಇಲ್ಲದೇ ಇರುವ ಈ ವಸತಿ ಶಾಲೆಯ 225 ವಿಧ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಆಡಲಾಗುತ್ತಿದೆ.
6ನೇ ತರಗತಿಯಿಂದ 10 ನೇ ತರಗತಿಯವರಗೆ ಎಲ್ಲಾ ವಿಧ್ಯಾರ್ಥಿಗಳಿಗೆ ಒಂದೇ ಕಡೆ ಭೋದನೆ ಮಾಡಲಾಗುತ್ತಿದೆ. ಭೋದನೆಯ ಸಮಯದಲ್ಲಿ ಒಂದು ತರಗತಿಯಿಂದ ಮತ್ತೊಂದು ತರಗತಿಗೆ ಪ್ರತಿಧ್ವನಿ ಕೇಳಿಸುತ್ತಿದೆ. ಕಟ್ಟದ ಸುತ್ತಲಿನ ಮನೆಗಳಿಂದ ಟಿವಿ ಸೌಂಡ್, ಮೊಬೈಲ್ ಸಾಂಗ್ಸ್ ಕೇಳಿಸುತ್ತಿದೆ.
ಆಟವಾಡಲು ಗ್ರೌಂಡ್ ವ್ಯವಸ್ಥೆಯೇ ಇಲ್ಲ, ಮಳೆ ಬಂದರೇ ಮಕ್ಕಳಿಗೆ ಮಲಗಲು ಸ್ಥಳವಿಲ್ಲ, ಚಿತ್ರಮಂದಿರದ ಛಾವಣಿ ಸಂಪೂರ್ಣ ಸೋರಿಕೆ ಆಗಿದೆ. 225 ವಿಧ್ಯಾರ್ಥಿಗಳಿಗೆ ಕೇವಲ ಎರಡು ನಲ್ಲಿ(ಕೊಳಾಯಿ), ಸರಿಯಾದ ಶೌಚಾಲಯ, ಸ್ನಾನಗೃಹ ವ್ಯವಸ್ಥೆ ಇಲ್ಲ, ಸಾಕಷ್ಟು ಭಾರಿ ಮೇಲಾಧಿಕಾರಿಗಳ ಗಮನಕ್ಕೆ ತಂದರು ಪ್ರಯೋಜನವಿಲ್ಲ, ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಿಲ್ಲ, ನೂತನ ತಾಲೂಕು ಕುರುಗೋಡಿನ ಗಾಂಧಿತತ್ವ ಆಧಾರಿತ(ಹುತಾತ್ಮರ) ಬಾಲಕಿಯ ವಸತಿ ಶಾಲೆಯ ಪರಿಸ್ಥತಿ ಕೇಳೋರು ಯಾರು ಎಂಬಂತಾಗಿದೆ.
ಬಳ್ಳಾರಿಗೆ ಡಿಎಂಎಫ್ ಅನುದಾನ ಸಾಕಷ್ಟು ಇದ್ದರು ಏಕೆ ಈ ನಿರ್ಲ್ಯಕ್ಷೆ……?ಬಾಲಕಿಯರ ಶಿಕ್ಷಣವನ್ನು ಸುಧಾರಿಸುವುದಕ್ಕಾಗಿ ಸರ್ಕಾರ ಏನೆನೋ ಕ್ರಮ ಕೈಗೊಳ್ಳುತ್ತಾರೆ, ಆದರೇ ಇರುವ ಮಕ್ಕಳಿಗೆ ಸರಿಯಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಏಕೆ ಆಗಿತ್ತಿಲ್ಲ, ಕುಡಿದ ಪ್ಯಾಕೆಟ್ಗಳು, ಸುತ್ತಲು ಕಸದ ರಾಶಿ, ಚರಂಡಿ ವಾಸನೆ ಹೀಗೆ ಹಲವು ಸಮಸ್ಯೆಗಳಾ ಆಗರವಾಗಿ ಕುರುಗೋಡಿನ ಬಾಲಕಿಯರ ವಸತಿ ಶಾಲೆ ಪರಿಣಮಿಸಿದೆ.