ಬಳ್ಳಾರಿ:- ಸಾಗುವಳಿ ಮಾಡುತ್ತಿರುವ ರೈತರಿಗೆ ಭೂಮಿಯನ್ನು ನೀಡುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಸಹಯೋಗದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಮಾಡಲಾಗಿದೆ.
ಭಜನೆ ಮಾಡುವ ಮೂಲಕ ಸಾಗುವಳಿದಾರರು ವಿಶಿಷ್ಟವಾಗಿ ಪ್ರತಿಭಟಿಸುತ್ತಿದ್ದಾರೆ. ಉಳಿಮೆ ಮಾಡುತ್ತಿರುವ ರೈತರ ಹೆಸರಿಗೆ ಭೂಮಿಯನ್ನು ಪಟ್ಟಮಾಡಲು ಆಗ್ರಹಿಸಿ ಪ್ರತಿಭಟನೆ ಮಾಡಲಾಗಿದೆ. ಕುರುಗೋಡಿನ ತಹಾಶೀಲ್ದರ್ ಅವರ ಕಛೇರಿ ಮುಂದೆ ಸುಮಾರು 13 ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ.
ಭಜನೆ ಮಾಡುವ ಮೂಲಕ ಸಾಗುವಳಿ ಮಾಡುತ್ತಿರುವ ರೈತರು, ಪ್ರತಿಭಟನೆ ಮಾಡುತ್ತಿದ್ದಾರೆ. ಸುಮಾರು 50-60 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರು, ಕುರುಗೋಡಿನ ಮಲ್ಲಪ್ಪನ ಕೆರೆಯಲ್ಲಿ ನಿರಂತರವಾಗಿ ಕೃಷಿ ಚಟುವಟಿಕೆಗಳು ನಡೆಯುತ್ತಿವೆ.
ಹೆಸರಿಗೆ ಮಾತ್ರ ಕೆರೆ, ಅಲ್ಲಿ ಕೆರೆಯೇ ಇಲ್ಲ, ಫಲವತ್ತಾದ ಭೂಮಿಯಾಗಿದ್ದು, ಕೃಷಿ ಚಟುವಟಿಕೆಗಳಿಗೆ ಯೋಗ್ಯವಾಗಿರುವ ಮಣ್ಣನ್ನು ಹೊಂದಿದೆ. ಈ ಭೂಮಿ ನೂರಾರು ಕುಟುಂಬಗಳಿಗೆ ಕೃಷಿ ಚಟುವಟಿಕೆಗಳಿಗೆ ಆಧಾರವಾಗಿದೆ. ಹಲವು ವರ್ಷಗಳಿಂದ ವ್ಯವಸಾಯ ಮಾಡುತ್ತಿರುವ ಬಾದನಹಟ್ಟಿ ಗ್ರಾಮದ ಕುಟುಂಬಗಳು, ಉಳಿಮೆ ಮಾಡುತ್ತಿರುವ ಬಹುತೇಕರು ಎಸ್ಸಿಗಳೆ ಇದ್ದರೆ, ಪ್ರಸ್ತುತ ಉಳಿಮೆ ಮಾಡುತ್ತಿರುವ ಇವರಿಗೆ, ಈ ಜಮೀನು ಬಿಟ್ಟರೇ ಬೇರೆ ಆಧಾರವಿಲ್ಲ, ಅದ್ದರಿಂದ ಉಳಿಮೆ ಮಾಡುತ್ತಿರುವ ಭೂಮಿಯನ್ನು ಪಟ್ಟ ಮಾಡಿಕೊಡಲು ಆಗ್ರಹಿಸಿ ಪ್ರತಿಭಟನೆ ಮಾಡಲಾಗಿದೆ.