ಬೆಂಗಳೂರು:- ನಗರದಲ್ಲಿ ಸುಲಿಗೆ ಮಾಡ್ತಿದ್ದ ನಾಲ್ವರು ಆರೋಪಿಗಳನ್ನು ಪುಲಕೇಶಿ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 1ಲಕ್ಷದ 50ಸಾವಿರ ಮೌಲ್ಯದ ಮೊಬೈಲ್ ಗಳು ಜಪ್ತಿ ಮಾಡಿದ್ದಾರೆ.
ಬೆಳ್ಳಿ ಚೈನ್, ನಗದು ಹಣ, ಬೈಕ್ ಮತ್ತು ಮಾರಕಾಸ್ತ್ರಗಳು ವಶಕ್ಕೆ ಪಡೆಯಲಾಗಿದೆ. ಉಸ್ಕಾನ್ ಪಾಷ, ಸೂರ್ಯ, ಇರ್ಫಾನ್, ಜೀವ ಬಂಧಿತ ಆರೋಪಿಗಳು..
ಆರೋಪಿಗಳು ಒಂಟಿಯಾಗಿ ಓಡಾಡೋರನ್ನ ಅಡ್ಡಗಟ್ಟಿ ಸುಲಿಗೆ ಮಾಡ್ತಿದ್ದರು. ಚಾಕು ತೋರಿಸಿ ಸಾರ್ವಜನಿಕರ ಬಳಿ ಹಣ, ಮೊಬೈಲ್, ಚಿನ್ನಾಭರಣ ದೋಚ್ತಿದ್ರು..
ಪುಲಕೇಶಿ ನಗರ, ಕಮರ್ಷಿಯಲ್ ಸ್ಟ್ರೀಟ್, ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ಎಸಗಿದ್ದರು. ಸದ್ಯ ಆರೋಪಿಗಳನ್ನ ಪೊಲೀಸರು ಬಂಧಿಸಿ ಜೈಲಿಗೆ ಕಳಿಸಿದ್ದಾರೆ.
ಪುಲಕೇಶಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.