ತಿರುವನಂತಪುರಂ: ಆರು ವರ್ಷದ ಬಾಲಕಿಯನ್ನು ಅಪಹರಿಸಿ 10 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಕೇರಳದ ಉದ್ಯಮಿ, ಆತನ ಪತ್ನಿ ಹಾಗೂ ಮಗಳನ್ನು ಕೇರಳ (Kerala) ಪೊಲೀಸರು (Police) ಬಂಧಿಸಿದ್ದಾರೆ. ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿಗಳಾದ ಪದ್ಮಕುಮಾರ್, ಆತನ ಪತ್ನಿ ಅನಿತಾ ಕುಮಾರಿ ಮತ್ತು ಯೂಟ್ಯೂಬರ್ ಆದ ಅನುಪಮಾ ಪದ್ಮನ್ಳನ್ನು ಬಂಧಿಸಲಾಗಿದೆ.
ಮಗುವನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟ ಸಂದರ್ಭದಲ್ಲಿ ಆರೋಪಿಗಳಲ್ಲಿ ಒಬ್ಬನ ಧ್ವನಿಯನ್ನು ಗುರುತಿಸಿ ನಾಗರಿಕರು ನೀಡಿದ ಮಾಹಿತಿ ಆರೋಪಿಗಳ ಬಂಧನಕ್ಕೆ ಬಹಳ ಸಹಾಯವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಅಪಹರಣಕ್ಕೊಳಗಾದ ಬಾಲಕಿಯ ಹಾಗೂ ಪದ್ಮಕುಮಾರ್ ಭಾವಚಿತ್ರದ ಸಹಾಯದಿಂದ ಪೊಲೀಸರು ಆರೋಪಿಯನ್ನು ಯಶಸ್ವಿಯಾಗಿ ಪತ್ತೆಹಚ್ಚಿದ್ದಾರೆ.
ಕುಟುಂಬದ ಆರ್ಥಿಕ ಸಮಸ್ಯೆಯೇ ಅಪಹರಣಕ್ಕೆ ಕಾರಣ ಎನ್ನಲಾಗಿದೆ. ಆರೋಪಿಗಳು ಕಳೆದ ಒಂದು ವರ್ಷದಿಂದ ಅಪಹರಣಕ್ಕೆ ಸೂಕ್ತವಾದ ಮಗುವನ್ನು ಹುಡುಕುತ್ತಿದ್ದರು. ಪ್ರಕರಣದ ಹಿಂದೆ ಅನಿತಾ ಕುಮಾರಿಯ ಪಾತ್ರ ಹೆಚ್ಚಿದೆ ಎಂದು ಪೊಲೀಸರು ತಿಳಿಸಿದ್ದಾರೆ.