ಚೆನ್ನೈ: ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳನ್ನು ಲಾಡ್ಜ್ ಒಂದರಲ್ಲಿ ಆಕೆಯ ಪ್ರೇಮಿಯೇ ಕೊಲೆಗೈದು ಬಳಿಕ ಮೃತದೇಹದ ಫೋಟೋವನ್ನು ಆಕೆಯ ವಾಟ್ಸಪ್ ಸ್ಟೇಟಸ್ಗೆ ಹಾಕಿದ ಘಟನೆ ಚೆನ್ನೈನಲ್ಲಿ (Chennai) ನಡೆದಿದೆ. ಮೃತದೇಹದ ಫೋಟೋವನ್ನು ಆರೋಪಿ ಆಕೆಯ ಸ್ಟೇಟಸ್ಗೆ ಹಾಕುತ್ತಿದ್ದಂತೆ ನೋಡಿದ ಸ್ನೇಹಿತರು ಪೊಲೀಸರಿಗೆ (Police) ಮಾಹಿತಿ ನೀಡಿದ್ದು, ಲಾಡ್ಜ್ನ ಸಿಸಿಟಿವಿ ಪರಿಶೀಲಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹತ್ಯೆಯಾದ ಯುವತಿಯನ್ನು ಕೇರಳದ ಕೊಲ್ಲಂನ ಫೌಸಿಯಾ (20) ಎಂದು ಗುರುತಿಸಲಾಗಿದೆ. ಆಶಿಕ್ (20) ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ. ಫೌಸಿಯಾ ಕ್ರೋಮ್ಪೇಟೆಯ ಕಾಲೇಜೊಂದರಲ್ಲಿ ಎರಡನೇ ವರ್ಷದ ನರ್ಸಿಂಗ್ ವಿದ್ಯಾರ್ಥಿನಿಯಾಗಿದ್ದು, ನ್ಯೂ ಕಾಲೋನಿಯ ಹಾಸ್ಟೆಲ್ನಲ್ಲಿ ವಾಸವಾಗಿದ್ದಳು ಎಂದು ತಿಳಿದು ಬಂದಿದೆ.
MS Dhoni News car: 3.30 ಕೋಟಿಯ ಕಾರು ಖರೀದಿಸಿದ MS ಧೋನಿ: ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್!
ತನಿಖೆ ವೇಳೆ ಫೌಸಿಯಾ ಹಾಗೂ ಆಶಿಕ್ ಐದು ವರ್ಷಗಳಿಂದ ಸಂಬಂಧ ಹೊಂದಿದ್ದು, ಇಬ್ಬರೂ ರಹಸ್ಯವಾಗಿ ಮದುವೆಯಾಗಿದ್ದರು ಎಂದು ತಿಳಿದು ಬಂದಿದೆ. ಅಲ್ಲದೇ ಇವರಿಗೆ ಅಪ್ರಾಪ್ತ ವಯಸ್ಸಿನಲ್ಲೇ ಮಗು ಜನಿಸಿದ್ದು, ಮಗುವನ್ನು ಚಿಕ್ಕಮಗಳೂರಿನಲ್ಲಿ ದತ್ತು ನೀಡಿದ್ದರು. ಆಶಿಕ್ ಜೊತೆ ಇನ್ನೊಬ್ಬ ಮಹಿಳೆಯ ಫೋಟೋ ಇದ್ದ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿದೆ.
ಈ ವೇಳೆ ಕತ್ತುಹಿಸುಕಿ ಕೊಂದಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಎರಡು ವರ್ಷಗಳ ಹಿಂದೆ ಫೌಸಿಯಾ ಇತರ ಮಹಿಳೆಯರೊಂದಿಗೆ ಆಶಿಕ್ನ ಸಂಬಂಧದ ಬಗ್ಗೆ ತಿಳಿದು ಕೇರಳ ಪೊಲೀಸರಿಗೆ ದೂರು ನೀಡಿದ್ದಳು. ಅಲ್ಲದೇ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ್ದಳು. ಜೈಲಿನಿಂದ ಹೊರಬಂದ ಕೂಡಲೇ ಕ್ಷಮೆಯಾಚಿಸಿ ಆಕೆಯೊಂದಿಗೆ ಮತ್ತೆ ಸಂಬಂಧ ಬೆಳೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.