ರಶ್ಮಿಕಾ ಮಂದಣ್ಣ (Rashmika Mandanna) ಆಕಾಶದಲ್ಲಿ ತೇಲಾಡುತ್ತಿದ್ದಾರೆ. ‘ಅನಿಮಲ್’ (Animal) ಸಿನಿಮಾ ಮೊದಲ ದಿನ ನೂರಾ ಹದಿನಾರು ಕೋಟಿ ಗಳಿಸಿದೆ. ಸಾನ್ವಿ ಸಂತಸಕ್ಕೆ ಕಾರಣ ಅದಲ್ಲ. ಈ ಚಿತ್ರದಲ್ಲಿ ಗೀತಾಂಜಲಿಯಾಗಿ ಜನರ ಮನಸನ್ನು ರಶ್ಮಿಕಾ ಕದ್ದ ರೀತಿ ಇದೆಯಲ್ಲ. ಅದೇ ಶ್ರೀವಲ್ಲಿ ಬಾಲಿವುಡ್ ಬದುಕಿಗೆ ಹೊಸ ಅಡಿಗಲ್ಲು ಹಾಕಿದೆ. ರಶ್ಮಿಕಾ ಹವಾ ಜೋರಾಗಿದೆ.
ರಶ್ಮಿಕಾ ಬಾಲಿವುಡ್ಗೆ ಕಾಲಿಟ್ಟು ಹಲವು ವರ್ಷ ಕಳೆದಿದೆ. ‘ಮಿಷನ್ ಮಜ್ನೂ’ ಹಾಗೂ ‘ಗುಡ್ಬೈ’ ಸಿನಿಮಾ ಬಂದಿತ್ತು. ಅಷ್ಟೇ ಬೇಗ ಸಿನಿಮಾ ಮಕಾಡೆ ಮಲಗಿತ್ತು. ರಶ್ಮಿಕಾ ಸುದ್ದಿಯಾದರು. ಆದರೆ ಸದ್ದು ಮಾಡಲಿಲ್ಲ. ಕಾರಣ ಅದರಲ್ಲಿ ಇದ್ದದ್ದೇ ಅಷ್ಟು ಅವಕಾಶ. ಅಷ್ಟೇ ಪಾತ್ರ. ಇನ್ನೇನು ಮಾಡೋಕಾಗುತ್ತೆ? ಸಾನ್ವಿ ಸೈಲೆಂಟ್ ಸುನಾಮಿಯಂತಿದ್ದರು. ಆದರೆ ‘ಅನಿಮಲ್’ ಸಿನಿಮಾ ನೋಡಿದವರು ಮಾತ್ರ, ದಿಸ್ ಈಸ್ ಕ್ರಶ್ಮಿಕಾ ಪಕ್ಕಾ ರಶ್ಮಿಕಾ. ರಿಯಲ್ ಟ್ಯಾಲೆಂಟೆಡ್ ಗರ್ಲ್ ಹೀಗೆ ಶಹಬ್ಬಾಶ್ಗಿರಿ ಕೊಡುತ್ತಿದ್ದಾರೆ. ರಣ್ಬೀರ್ ಪತ್ನಿ ಆಲಿಯಾ ಭಟ್ (Aliaa Bhatt) ಕೂಡ ಶ್ರೀವಲ್ಲಿ ನಟನೆ ನೋಡಿ ಬೆರಗಾಗಿದ್ದಾರೆ. ರಶ್ಮಿಕಾ ಮಂದಣ್ಣಗೆ ಭೇಷ್ ಎಂದಿದ್ದಾರೆ.
ಸ್ಯಾಂಡಲ್ವುಡ್, ಕಾಲಿವುಡ್, ಟಾಲಿವುಡ್ನಿಂದ ನೇರ ಬಾಲಿವುಡ್ಗೆ ಹೋದ ಹುಡುಗಿಗೆ ಗೆಲುವು ದಕ್ಕಿರಲಿಲ್ಲ. ಈಗ ಒಂದೇ ಸಲಕ್ಕೆ ಜಾಕ್ಪಾಟ್ ಹೊಡೆದಿದೆ. ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ರಣಬೀರ್ (Ranbir Kapoor) ಹೀರೋ ಬಂಪರ್ ಹಿಟ್. ‘ಕಿರಿಕ್ ಪಾರ್ಟಿ’ ಸಾನ್ವಿ ಈಗ ಅನಿಮಲ್ ಗೀತಾಂಜಲಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ.
‘ಅನಿಮಲ್’ ಸಕ್ಸಸ್ ನಂತರ ರಶ್ಮಿಕಾ ಮಂದಣ್ಣಗೆ ಬಾಲಿವುಡ್ನಲ್ಲಿ ಗಟ್ಟಿ ನೆಲೆ ಸಿಕ್ಕಿದೆ. ಈ ಒಂದು ಸಿನಿಮಾ ಇಷ್ಟೊಂದು ಸುದ್ದಿ ಮಾಡಿದ ಮೇಲೆ ಬಾಲಿವುಡ್ ಸ್ಟಾರ್ ನಟರಿಗೆ ನಾಯಕಿಯಾಗೋದ್ರಲ್ಲಿ ಅನುಮಾನವಿಲ್ಲ.