ಅಮರಾವತಿ: ಮಿಚೌಂಗ್ ಚಂಡಮಾರುತ (Cyclone Michaung) ಭಾರೀ ಅನಾಹುತ ಸೃಷ್ಟಿಸುತ್ತಿದೆ. ಆಂಧ್ರಪ್ರದೇಶ, ತಮಿಳುನಾಡು ಹಾಗೂ ಒಡಿಶಾ ತೀರ ಪ್ರದೇಶದಲ್ಲಿ ಭಾರೀ ಮಳೆ ಆಗುತ್ತಿದೆ.
ಆಂಧ್ರದ ನೆಲ್ಲೂರು (Nelluru Andhra Pradesh) ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಮಳೆ ಬಾಲಕನೊಬ್ಬನನ್ನು ಬಲಿ ಪಡೆದಿದೆ. ಬಿರುಗಾಳಿಯ ತೀವ್ರತೆಗೆ ಗುಡಿಸಲು ಕುಸಿದು ಬಾಲಕ ಬಲಿ ಆಗಿದ್ದಾನೆ. ಸದ್ಯ ನೆಲ್ಲೂರಿಗೆ ಆಗ್ನೇಯ ದಿನನಲ್ಲಿ 440 ಕಿಲೋಮೀಟರ್ ದೂರದಲ್ಲಿ ಚಂಡಮಾರುತ ಕೇಂದ್ರೀಕೃತವಾಗಿದೆ. ವಾಯುವ್ಯ ದಿಕ್ಕಿನತ್ತ ಪಯಣಿಸುತ್ತಿರುವ ಈ ಚಂಡಮಾರುತ ಡಿಸೆಂಬರ್ 5 ರಂದು ನೆಲ್ಲೂರು-ಮಚಲಿಪಟ್ಟಣಂ ನಡುವೆ ತೀರ ದಾಟಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸಂಜೆ ದೆಹಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ (Narendra Modi), ಮಿಚೌಂಗ್ ಚಂಡಮಾರುತ ಎದುರಿಸಲು ಎಲ್ಲಾ ಸನ್ನದ್ಧತೆ ನಡೆಸಲಾಗಿದೆ. ತೀರ ಪ್ರದೇಶದ ರಾಜ್ಯಗಳ ಜೊತೆ ಸತತವಾಗಿ ಸಂಪರ್ಕದಲ್ಲಿದ್ದೇವೆ. ಬಿಜೆಪಿ ಕಾರ್ಯಕರ್ತರು ನೆರವಿಗೆ ಧಾವಿಸಬೇಕು ಎಂದು ಕರೆ ನೀಡಿದ್ದಾರೆ