ಬೆಂಗಳೂರು: ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದ ಮೇಲೆ ಸಹಜವಾಗಿಯೇ ಬಿಜೆಪಿಗೆ ಖುಷಿ ತಂದಿದೆ. ಇಂದಿನಿಂದ ಆರಂಭವಾಗಲಿರುವ ಸಂಸತ್ ಅಧಿವೇಶನದ ಮೇಲೆಯೂ ಇದು ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.
ಸರ್ಕಾರದ ವಿರುದ್ಧ ಮುಗಿಬೀಳಲು ವಿಪಕ್ಷಗಳು ಸಜ್ಜಾಗಿವೆ. ಉತ್ತರ ಭಾರತದ ಗೆಲುವಿನಿಂದ ಫುಲ್ ಜೋಷ್ನಲ್ಲಿರುವ ಬಿಜೆಪಿ, ವಿಪಕ್ಷಗಳಿಗೆ ಸಮರ್ಥವಾಗಿ ಕೌಂಟರ್ ನೀಡಲು ಸಜ್ಜಾಗಿದೆ
ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್.ಅಶೋಕ್, ಹೆಚ್.ಡಿ ಕುಮಾರಸ್ವಾಮಿ, ವಿಜಯೇಂದ್ರರಿಂದ ಜೋಡಿ ಅಸ್ತ್ರಗಳು ಮುಗಿಬೀಳಲು ಸಜ್ಜಾಗಿದ್ದಾರೆ. ಸರ್ಕಾರದ ವೈಫಲ್ಯಗಳ ಕುರಿತು ಅಧಿವೇಶನದಲ್ಲಿ ಜಂಟಿ ಹೋರಾಟ ನಡೆಯುವುದು ಖಚಿತವಾಗಿದೆ. ಅಧಿವೇಶನದ ಮೊದಲ ದಿನದಿಂದಲೇ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಲು ದೋಸ್ತಿಗಳ ಪ್ಲ್ಯಾನ್ ನಡೆದಿದೆ. ಬಿಜೆಪಿ-ಜೆಡಿಎಸ್ ಜಂಟಿ ಅಸ್ತ್ರಕ್ಕೆ ಕಾಂಗ್ರೆಸ್ ಕೌಂಟರ್ ಏನು ಅನ್ನೋದು ಕುತೂಹಲ ಮೂಡಿಸಿದೆ
ದೋಸ್ತಿಗಳ ಹೋರಾಟದ ಅಸ್ತ್ರ ಏನು?
* ಸಿದ್ದರಾಮಯ್ಯ ಸರ್ಕಾರದ 60 ವೈಫಲ್ಯಗಳನ್ನ ಉಲ್ಲೇಖಿಸಿ ಹೋರಾಟ
* ಬಿಜೆಪಿ ಹೋರಾಟಕ್ಕೆ ಜೆಡಿಎಸ್ ಕೈ ಜೋಡಿಸಿ ಜಂಟಿ ಹೋರಾಟ ನಡೆಸುವುದು.
* ಬರ ಅಧ್ಯಯನ ಮಾಡಿರೋ ಬಿಜೆಪಿ, ಜೆಡಿಎಸ್ ನಿಂದ ಸರ್ಕಾರದ ವಿರುದ್ಧ ಬರ ಅಸ್ತ್ರ ಪ್ರಯೋಗ.
* ಬರ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ ಅಂತ ಸರ್ಕಾರದ ವಿರುದ್ಧ ಹೋರಾಟ.
* ಬರ ಪರಿಹಾರ ಕೊಡದೇ ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡುತ್ತಿದೆ ಎಂಬ ಆರೋಪ
* ಡಿಕೆ ಶಿವಕುಮಾರ್ ಸಿಬಿಐ ಕೇಸ್ ವಾಪಸ್ ಪಡೆದಿರೋ ಬಗ್ಗೆ ಚರ್ಚೆ
* ಗೃಹಜ್ಯೋತಿ ಯೋಜನೆ ಕೊಟ್ಟು ಲೋಡ್ ಶೆಡ್ಡಿಂಗ್ ಮಾಡ್ತಿರೋ ಅಂಶ ಮುದ್ದಿಟ್ಟುಕೊಂಡು ಹೋರಾಟ.
* ಗ್ಯಾರಂಟಿಗಳ ಅನುಷ್ಠಾನ ಸರಿಯಾಗಿ ಆಗಿಲ್ಲ ಎಂಬ ಅಂಶ
* ವರ್ಗಾವಣೆ ದಂಧೆಯಲ್ಲಿ ಸರ್ಕಾರ ಮುಳುಗಿದೆ ಅಂತ ರಾಜಕೀಯ ಅಸ್ತ್ರ.
* ಜಾತಿಗಣತಿ ವಿವಾದ ಕುರಿತು ಸರ್ಕಾರದ ವಿರುದ್ಧ ಹೋರಾಟ.
* ರಾಷ್ಟ್ರೀಯ ಶಿಕ್ಷಣ ನೀತಿ ರದ್ದು ಮಾಡಿರೋದಕ್ಕೆ ವಿರೋಧ
* ನೀರಾವರಿ ಯೋಜನೆಗಳು ನಿರ್ಲಕ್ಷ್ಯ, ಗ್ಯಾರಂಟಿ ಯೋಜನೆ ಬಿಟ್ಟು ಯಾವುದೇ ಕೆಲಸ ಆಗ್ತಿಲ್ಲ ಅಂತ ಸರ್ಕಾರದ ವಿರುದ್ಧ ಹೋರಾಟ.
* ತೆಲಂಗಾಣ ಚುನಾವಣೆ ಸ್ಪೀಕರ್ ಸ್ಥಾನದ ಬಗ್ಗೆ ಸಚಿವ ಜಮೀರ್ ಆಡಿರೋ ವಿವಾದಾತ್ಮಕ ವಿಷಯ ಕುರಿತು ಹಕ್ಕುಚ್ಯುತಿ ಮಂಡನೆಗೆ ಬಿಜೆಪಿ ನಿರ್ಧಾರ.