ಬಿಗ್ ಬಾಸ್ ಮನೆಯ (Bigg Boss Kannada 10) ಆಟಕ್ಕೆ 50 ದಿನ ಕಳೆಯುತ್ತಿದ್ದಂತೆ ಅವಿನಾಶ್ ಶೆಟ್ಟಿ- ಪವಿ ಪೂವಪ್ಪ ಎಂಟ್ರಿಯಾಗಿದೆ. ಮೊದಲ ವಾರವೇ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ನಲ್ಲಿ ಸುದೀಪ್ ಅವರಿಂದ ಪಾಠ ಹೇಳಿಸಿಕೊಂಡಿದ್ದಾರೆ. ಬಳೆ ವಿಚಾರ ಮಾತೆತ್ತಿದ ಪವಿ ಪೂವಪ್ಪಗೆ(Pavi Poovappa) ಸುದೀಪ್ ಕಡೆಯಿಂದ ಸ್ಪೆಷಲ್ ಕ್ಲಾಸ್ ಆಗಿದೆ.
ಪವಿ ಪೂವಪ್ಪ- ಅವಿನಾಶ್ ಶೆಟ್ಟಿ (Avinash Shetty) ಅವರಿಗೆ ಹೊರಗಡೆಯ ಯಾವ ವಿಚಾರವನ್ನೂ ದೊಡ್ಮನೆಯಲ್ಲಿ ಚರ್ಚೆ ಮಾಡುವಂತಿಲ್ಲ ಎಂದು ಬಿಗ್ ಬಾಸ್ ಮೊದಲೇ ತಾಕೀತು ಮಾಡಿದ್ದರು. ಆದರೆ ಪವಿ ಅವರು ಬಾಯಿ ತಪ್ಪಿ ಟ್ರೋಲ್ ಪೇಜ್ಗಳಲ್ಲಿ ವಿನಯ್ ಗೌಡ ಬಳೆ ವಿಚಾರ ಚರ್ಚೆ ಆಗಿದ್ದನ್ನು ವಿನಯ್ ಮುಂದೆ ಹೇಳಿದ್ದರು. ರೂಲ್ಸ್ ಮರೆತು ಮನೆಯ ಹೊರಗಿನ ವಿಚಾರವನ್ನ ಪವಿ ರಿವೀಲ್ ಮಾಡಿದ್ದರು. ಈ ವಿಷಯ ತಿಳಿದ ಮೇಲೆ ವಿನಯ್, ನಾನು ಮಾಡಿದ ತಪ್ಪಿನಿಂದ ನನ್ನ ಹೆಂಡತಿ- ಮಗ ಅನುಭವಿಸುವ ಹಾಗಾಯ್ತು ಎಂದು ಬಾತ್ರೂಮ್ನಲ್ಲಿ ಕಣ್ಣೀರು ಹಾಕಿದರು. ಆನಂತರ ಏನೂ ಆಗಿಲ್ಲ ಎಂದು ಬಿಗ್ ಬಾಸ್ ವಿನಯ್ರನ್ನು (Vinay Gowda) ಸಂತೈಸಿದರು. ಹೊರಗೆ ಎಲ್ಲವೂ ಕ್ಷೇಮವಾಗಿದೆ ಎಂದು ಭರವಸೆ ನೀಡಿದ್ದರು.
ಬಿಗ್ ಬಾಸ್ ಶೋ ಶುರುವಾಗಿ 50 ದಿನ ಆಗಿದೆ. ಎಲ್ಲರೂ ಬಳೆ ವಿಚಾರವನ್ನು ಮರೆತಿದ್ದಾರೆ. 50 ದಿನಗಳನ್ನು ಕಳೆದ ಸ್ಪರ್ಧಿಯ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು. ನನ್ನ ಸ್ಪರ್ಧಿಯ ಬಗ್ಗೆ ನೀವು ಹೇಗೆ ಮಾತನಾಡಿದ್ರಿ ಎಂದು ಕಿಚ್ಚ ಸುದೀಪ್ (Sudeep) ಅವರು ಪವಿಗೆ ಕ್ಲಾಸ್ ತಗೊಂಡಿದ್ದಾರೆ. ವಿನಯ್ ಗೌಡ ಹೆಂಡತಿ, ಮಗ ಹೇಗಿದ್ದಾರೆ? ಅವರು ಎಲ್ಲಿದ್ದಾರೆ? ಅವರ ಮನೆಗೆ ಹೋಗಿ ಬಂದಿದ್ದೀರಾ? ಏನೂ ನಿಮಗೆ ಗೊತ್ತಿಲ್ಲ. ಏನೂ ವಿಷಯ ಗೊತ್ತಿಲ್ಲದೆ ನೀವು ವಿನಯ್ ಬಳಿ ಹೋಗಿ ಟ್ರೋಲ್ ಪೇಜ್ಗಳಲ್ಲಿ ಬಳೆ ಬಗ್ಗೆ ಏನೋ ಬಂತು ಎಂದು ಹೇಳಿದ್ದೀರಿ. ಯಾವ ಎಪಿಸೋಡ್ ನೋಡದೆ ಒಂದು ವಿಷಯದ ಬಗ್ಗೆ ಹೇಗೆ ಕಾಮೆಂಟ್ ಪಾಸ್ ಮಾಡ್ತೀರಿ? ಒಂದು ಪಾಸಿಂಗ್ ಕಾಮೆಂಟ್ನಿಂದ ಒಬ್ಬ ವ್ಯಕ್ತಿಯ ಮನಸ್ಥಿತಿ ಬದಲಾಗತ್ತೆ. 100 ಕಿಮೀ ವೇಗದಲ್ಲಿ ಹೋಗುವ ಸ್ಪರ್ಧಿಗೆ ಅರ್ಧ ದಾರಿಗೆ ಎಂಡ್ ಬೋರ್ಡ್ ಹಾಕಿದರೆ ಏನಾಗುವುದು? ಎಂದು ಸುದೀಪ್ ಹೇಳಿದ್ದಾರೆ.